ಬಂಟ್ವಾಳ: ತಾಲೂಕಿನ ಪುದುಗ್ರಾಮದ ನೇತ್ರಾವತಿ ನದಿ ತಟದಲ್ಲಿರುವ ಐತಿಹಾಸಿಕ ಕ್ಷೇತ್ರವಾದ ನಾಣ್ಯ ಶ್ರೀ ನಾಗರಕ್ತೇಶ್ವರೀ ಕ್ಷೇತ್ರದ ಸಾನಿಧ್ಯವೃದ್ಧಿ ಮತ್ತು ಪುನರುತ್ಥಾನಕ್ಕಾಗಿ ಪರಿಸರದ ಆರು ಗ್ರಾಮಸ್ಥರು ಹಾಗೂ ಭಕ್ತರ ಸಂಕಲ್ಪದಂತೆ ಸಾನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಮಹೋತ್ಸವ ಮತ್ತು ಅಷ್ಟಪವಿತ್ರ ನಾಗಮಂಡಲ ಪುಣ್ಯೋತ್ಸವವು ಜ.13 ರಿಂದ 16 ರ ತನಕ ಜರಗಲಿದೆ ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ತಿಳಿಸಿದ್ದಾರೆ. ಗುರುವಾರ ಸಂಜೆ ಶ್ರೀ ನಾಗರಕ್ತೇಶ್ವರೀ ಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಗಳು ವೇ.ಮೂ.ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈಧಿಕ ವಿಧಿವಿಧಾನಗಳು ನಡೆಯಲಿದ್ದು,ನಾಡಿನ ಜನತೆ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗುವಂತೆ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಮಿತಿ ಸಂಚಾಲಕ ತೇವು ತಾರನಾಥ ಕೊಟ್ಟಾರಿ ಅವರು ಜ.13 ರಂದು ಸಾಮೂಹಿಕ ಪ್ರಾರ್ಥನೆ ಯ ಬಳಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು,ಪ್ರತಿದಿನ ವೈಧಿಕ,ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.ಜ.14ರಂದು ಸಂಜೆ 3 ಗಂಟೆಗೆ ಅರ್ಕುಳ ಶ್ರೀ ವರದೇಶ್ವರ ದೇವಸ್ಥಾನದಿಂದ ಶ್ರೀ ಕ್ಷೇತ್ರ ನಾಣ್ಯಕ್ಕೆ ಹಸಿರುಹೊರೆಕಾಣಿಕೆಯ ಭವ್ಯಮೆರವಣಿಗೆ ನಡೆಯುವುದು,ಸಂಜೆವ5-30 ಕ್ಕೆ ‘ಸತ್ಸಂಗ ಲಹರಿ’ ಕಾರ್ಯಕ್ರಮ ಜರಗಲಿದೆ ಜ.15 ರಂದು ಚಂಡಿಕಾ ಹೋಮ,ಸಂಜೆ ದುರ್ಗಾನಮಸ್ಕಾರಪೂಜೆ,ಅಷ್ಟವಾಧನ ಪೂಜೆ ನಡೆಯಲಿದೆ ಎಂದರು.ಜ.16 ರಂದು ವಿವಿಧ ವೈಧಿಕ ಪೂಜೆಯ ಬಳಿಕ ರಕ್ತೇಶ್ವರೀಗೆ ಕಲಶಾಭಿಷೇಕ,ಸಾನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಮಧ್ಯಾಹ್ನ ಅನ್ನಸಂತರ್ಪಣೆ,ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಸುಧರ್ಮಸಭೆ,ರಾತ್ರಿ ನಾಗಬನದಲ್ಲಿ ಹಾಲಿಟ್ಟು ಸೇವೆ,11.30 ರಿಂದ ನಾಗಪಾತ್ರಿಗಳಾದ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರಿಂದ ಮತ್ತು ಮುದ್ದೂರು ಶ್ರೀ ಕೃಷ್ಣಪ್ರಸಾದ್ ವೈದ್ಯರ ಬಳಗದಿಂದ ಅಷ್ಟಪವಿತ್ರ ನಾಗಮಂಡಲ ಪುಣ್ಯೋತ್ಸವ ಜರಗಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪಾದಾಧಿಕಾರಿಗಳಾದ ಐತಪ್ಪ ಆಳ್ವ ಸುಜೀರುಗುತ್ತು,ಪ್ರಕಾಶ್ಚಂದ್ರ ರೈ ದೇವಸ್ಯ, ಚಂದ್ರಹಾಸ ಡಿ.ಶೆಟ್ಟಿ ರಂಗೋಲಿ,ಪೂವಪ್ಪ ಬಂಗೇರ ನಾಣ್ಯ,ಮನೋಜ್ ಆಚಾರ್ಯ ನಾಣ್ಯ,ಪದ್ಮನಾಭ ಶೆಟ್ಟಿ ಪುಂಚಮೆ,ರಾಧಕೃಷ್ಣ ತಂತ್ರಿ ಪೊಳಲಿ,ಮಾಧವ ನಾಣ್ಯ,ದೀರಜ್ ರಘರಾಮ್,ಎಂ.ಆರ್.ನಾಯರ್,ಉಮೇಶ್ ಸಾಲ್ಯಾನ್ ಬೆಂಜನಪದವು,ಸಂತೋಷ್ ನೆತ್ತರಕೆರೆ,ವಿನಯ್ ಕಡೇಗೋಳಿ,ಎ.ಕೆ.ಗಿರೀಶ್ ಶೆಟ್ಟಿ,ಚಂದ್ರಕಲಾವರದ,ನಾಣ್ಯ ಪದ್ಮನಾಭ ಗೋವಿಂದೋಟ,ದಿನೇಶ್ ಶೆಟ್ಟಿ ಕೊಟ್ಟಿಂಜ,ನವೀನ್ ಪೊನ್ನೋಡಿ,ಸುಂದರನಾಣ್ಯ,ಲಕ್ಷ್ಮಣ ನಾಣ್ಯ,ಕೇಶವ ನಾಣ್ಯ ಮೊದಲಾದವರಿದ್ದರು. ವಿಶೇಷತೆಗಳು: ಪುದು,ಅರ್ಕುಳ,ಮೇರಮಜಲು,ಕೊಡ್ಮಾನ್,Attachments area
