ಬಂಟ್ವಾಳ: ಅಳವಿನಂಚಿನಲ್ಲಿರುವ ವನ್ಯ ಜೀವಿ ಚಿಪ್ಪ ಹಂದಿಯ ಚಿಪ್ಪುಗಳನ್ನು ಮಾರಾಟಮಾಡಲು ಯತ್ನಿಸುತ್ತಿದ್ದ ಮೂವರನ್ನು ಮಂಗಳೂರು ಸಿ.ಐ.ಡಿ.ಅರಣ್ಯ ಸಂಚಾರಿ ದಳದ ಸಿಬಂದಿಗಳು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ.
ಹಾಲ್ದೂರು ನಿವಾಸಿ ಅಪ್ಪುಸ್ವಾಮಿ(36). ಗುಪ್ತಾಶೆಟ್ಟಿಹಳ್ಳಿ ನಿವಾಸಿ ಕೆ.ವಿ..ಮಣಿ(37), ಮೂಡಿಗೆರೆ ನಿವಾಸಿ ಎಂ.ಎಂ.ರಘ (41)ಆರೋಪಿಗಳಾಗಿದ್ದಾರೆ. ಬಂಧಿತರಿಂದ 4.400 ಕೆ.ಜಿ.ಚಿಪ್ಪು ಹಂದಿಯ ಚಿಪ್ಪು, ತಲಾ ಒಂದು ಆಟೋ ರಿಕ್ಷಾ ಮತ್ತು ಮೋಟಾರ್ ಸೈಕಲ್ ನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೀಜಿಹಳ್ಳಿ ಸೇತುವೆಯ ಬಳಿ ಚಿಪ್ಪು ಮಾರಾಟಕ್ಕಾಗಿ ನಿಂತಿದ್ದ ವೇಳೆಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಂಚಾರಿ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಚಿಪ್ಪಹಂದಿಯ ಚಿಪ್ಪು ಪತ್ತೆಯಾಗಿದೆ. ಬಳಿಕ ಮುಂದಿನ ಕ್ರಮಕ್ಕಾಗಿ ಮೂಡಿಗೆರೆ ಆರ್.ಎಫ್.ಒ.ಅವರಿಗೆ ಹಸ್ತಾಂತರ ಮಾಡಿದ್ದಾರೆ.
. ಸಿ.ಐ.ಡಿ.ಅರಣ್ಯ ಘಟಕ ಬೆಂಗಳೂರು ಎ.ಡಿ.ಜಿ.ಪಿ ಡಾ! ರವೀಂದ್ರ ನಾಥನ್ ಮತ್ತು ಸಿ.ಐ.ಡಿ.ಅರಣ್ಯ ಮಡಿಕೇರಿ ಘಟಕದ ಪೊಲೀಸ್ ಅಧೀಕ್ಷಕರಾದ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಸಿ.ಐ.ಡಿ.ಅರಣ್ಯ ಸಂಚಾರದ ಪಿ.ಎಸ್.ಐ ಪುರುಷೋತ್ತಮ, ಸಿಬ್ಬಂದಿ ಗಳಾದ ಜಗನ್ನಾಥ ಶೆಟ್ಟಿ, ಉದಯ ನಾಯ್ಕ, ಮಹೇಶ್, ದೇವರಾಜ್ ಹಾಗೂ ಚಿಕ್ಕಮಗಳೂರು ಅರಣ್ಯ ಘಟಕದ ಸಿಬ್ಬಂದಿಗಳ ಸಹಕಾರದಲ್ಲಿ ಕಾರ್ಯಚರಣೆ ಮಾಡಲಾಗಿತ್ತು.
