ಬಂಟ್ವಾಳ: ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆವರೆಗಿನ ದ್ವಿಪಥ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದು,ಗುರುವಾರ  ಭಂಡಾರಿಬೆಟ್ಟು ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ನಿರ್ಮಾಣ ಹಂತದ   ಗುಂಡಿಗೆ  ಧುಮುಕಿದ ಘಟನೆ ಗುರುವಾರ ನಡೆದಿದೆ. ಈ ಘಟನೆಯಿಂದ ಕಾರಿನ ಚಾಲಕ ಪವಾಡಸದೃಶವಾಗಿ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.ಬಂಟ್ವಾಳ ಬೈಪಾಸ್ ಗ್ಯಾರೇಜೊಂದರ ಮುಂಭಾಗ ಸೇತುವೆಯ ಕಾಮಗಾರಿ ನಡೆಯುತ್ತಿದ್ದು, ಬಂಟ್ವಾಳ ಕಡೆಯಿಂದ ಬಿ.ಸಿ.ರೋಡ್ ಗೆ ಬರುತ್ತಿದ್ದ ಮಾರುತಿ ಕಾರು ಮುಂಭಾಗ ರಸ್ತೆ ಡೈವರ್ಶನ್ ಕಾಣದೆ ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಧುಮುಕಿದೆ.ಪರಿಣಾಮ ಚಾಲಕ ರಾಜೇಶ್ ಸಣ್ಣಪುಟ್ಟ ಗಾಯಗೊಂಡಿದ್ದಾರೆ.15-09-44-IMG-20200109-WA0023-1068x497

ಬಿ.ಸಿ.ರೋಡು ವೃತ್ತದಿಂದ-ಪುಂಜಾಲಕಟ್ಟೆ ಯವರೆಗೆ ದ್ವಿಪಥ  ರಸ್ತೆಯ ಕಾಮಗಾರಿಯ ಬಿರುಸಿನಿಂದ  ನಡೆಯುತ್ತಿದ್ದು, ರಸ್ತೆಯಲ್ಲಿ ಯಾವುದೇ ಮುನ್ಸೂಚನಾ ಫಲಕ ಹಾಕದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬೆಳಿಗ್ಗೆಕಾರು ಗುಂಡಿಗೆ ಬಿದ್ದ ಬಳಿಕ  ಈ ಭಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.  ಬಿ.ಸಿ.ರೋಡು ಕಡೆಯಿಂದ ಗಾಣದಪಡ್ಪು,ಭಂಡಾರಿಬೆಟ್ಟು ಮೊದಲಾದೆಡೆ  ಕಾಮಗಾರಿ  ನಡೆಯುತ್ತಿದೆ,ಒಂದೆರಡು ಸೇತುವೆಯ ಕೆಲಸಗಳು ನಡೆಯುತ್ತಿದೆಯಾದರೂ ಕೆಲವು ಕಡೆಗಳಲ್ಲಿ ರಸ್ತೆ ಎಲ್ಲಿ ಎಂದೆ ಕಾಣಿತ್ತಿಲ್ಲ.9 btl car (1)

ರಸ್ತೆಗಳು ಎರು,ತಗ್ಗು ಗಳಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕು ಅಡಚಣೆಯಾಗುತ್ತಿದೆ.  ರಸ್ತೆಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್ ಇಲ್ಲವೆ ಸೂಚನಾ ಫಲಕಗಳನ್ನು ಹಾಕದಿರುವುದು ಅಪಘಾತದಂತಹ ಘಟನೆಗಳು  ನಡೆಯುತ್ತಿದೆ ಎಂದು ದೂರಲಾಗಿದೆ, ಏಕಕಾಲದಲ್ಲಿ ಎರಡು ವಾಹನಗಳು ಎದುರು ಬದರಾಗಿ ಸಂಚರಿಸಲು ಅವಕಾಶವಿಲ್ಲದ ಕಾರಣ ಟ್ರಾಫಿಕ್ ಜಾಮ್ ಕೂಡ ಉಂಟಾಗುತ್ತಿದೆ

By suddi9

Leave a Reply

Your email address will not be published. Required fields are marked *