ಬಂಟ್ವಾಳ: ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಸಜೀಪನಡುಗ್ರಾಮದ ಕಂಚಿನಡ್ಕ ಪದವು ನಿವಾಸಿ ಶೇಖಬ್ಬ ಎಂಬವರ ಪುತ್ರ ಸಿದ್ದಿಕ್ ಯಾನೆ ಅಬೂಬಕ್ಕರ್ ಸಿದ್ದಿಕ್( 32 ವ) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 5 ಸಾ. ರೂ.ಮೌಲ್ಯದ 350 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ ಐ ಪ್ರಸನ್ನ ಮತ್ತವರ ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ಆರೋಪಿಯು ಬ್ಯಾಗ್ ಹಿಡಿದುಕೊಂಡು ಕಂಚಿನಡ್ಕ ಪದವಿನ ಅಂಬೆಡ್ಕರ್ ಭವನದ ಬಳಿ ನಡೆದುಕೊಂಡು ಹೋಗುತ್ತಿದ್ದು, ಪೊಲೀಸರನ್ನು ಕಂಡು ಓಡಲು ಯತ್ನಿಸಿದಾಗ ಅನುಮಾನದಿಂದ ತಕ್ಷಣ ಆತನನ್ನು ವಶಕ್ಕೆ ಪಡೆದು ಬ್ಯಾಗನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು 350 ಗ್ರಾಂ ತೂಕದ ನಿಷೇದಿತ ಗಾಂಜಾ ಪತ್ತೆಯಾಗಿದೆ ಕೂಡಲೇ ಅತನನ್ನು ಬಂಧಿಸಿಗಾಂಜಾವನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಬಂಟ್ವಾಳ ಉಒವಿಭಾಗದ ಡಿವೈಎಸ್ಪಿ ವೈಲೆಂಟೆನ್ ಡಿ`ಸೋಜಾ ರವರ ಮಾರ್ಗದರ್ಶನದಲ್ಲಿ ಸಿಐ ಟಿ.ಡಿ ನಾಗರಾಜ್, ರವರ ನಿರ್ಧೇಶನದಲ್ಲಿ ಪಿಎಸ್ಐ ಪ್ರಸನ್ನ. ಎಂ.ಎಸ್ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ಕಲೈಮಾರ್, ಹೆಚ್.ಸಿ ಸುರೇಶ್, ಜನಾರ್ಧನ, ಕಿರಣ್, ಪಿ.ಸಿ ಮನೋಜ್ ಕಾರ್ಯಾಚರಣೆ ನಡೆಸಿದ್ದಾರೆ.

