ಬಂಟ್ವಾಳ: ಶಾಸಕ ಹಾಗೂ ಜಿಪಂ ಸದಸ್ಯರ ಅನುದಾನದಲ್ಲಿ ಮಂಜೂರಾದ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಲಾಯಿತು.
ಪೂರ್ಲಿಪ್ಪಾಡಿ ಗೆಜ್ಜೆಗಿರಿ ನಗರದಿಂದ ಮಂಜನಗುಡ್ಡೆ ಅಣ್ಣಪ್ಪ ಪಂಜುರ್ಲಿ ಮೂಲಸ್ಥಾನ ಕಾಂಕ್ರಿಟ್ ರಸ್ತೆ, ಪೂರ್ಲಿಪ್ಪಾಡಿ ಶಿವಾಜಿನಗರ ಮರಾಟಿ ಸಮುದಾಯ ಭವನದ ತಡೆಗೋಡೆ ಕಾಮಗಾರಿ, ಗೆಜ್ಜೆಗಿರಿ ನಗರ ರಸ್ತೆಬದಿ ಚರಂಡಿ ಕಾಮಗಾರಿಗಳ ಗುದ್ದಲಿಪೂಜೆಯನ್ನು ಜಿಪಂ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ ನೆರವೇಸಿದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯೆ ಲಕ್ಮೀಗೋಪಾಲ ಆಚಾರ್ಯ, ಗ್ರಾಪಂ ಅಧ್ಯಕ್ಷ ವಿಠಲ, ಸದಸ್ಯ ರಾದ ಗುಲಾಬಿ, ಮಾಜಿ ಜಿಪಂ ಸದಸ್ಯ ಚೆನ್ನಪ್ಪ ಕೋಟ್ಯಾನ್, ಬಿ.ಕೆ.ಅಣ್ಣಿಪೂಜಾರಿ, ಕೃಷ್ಣಪ್ಪ ಆಚಾರ್ಯ, ಈಶ್ವರ ಪೂಜಾರಿ ಕುರ್ಮಾನು, ಪ್ರಕಾಶ್ ಕುರ್ಮಾನು, ಬಾಬು ನಾಯ್ಕ್, ಸಂಜೀವ ಪೂಜಾರಿ, ರುಕ್ಮಯ ಸಪಲ್ಯ, ಲೋಕಯ್ಯ ಪಂಡಿತ್, ರಮೇಶ್ ಪೂಜಾರಿ, ನಾಗರತ್ನ, ಸ್ವಾತಿ, ಬೇಬಿ, ಸುನಂದಗೆಜ್ಜೆಗಿರಿ ನಗರ, ಸೌಮ್ಯಬಾಬು ನಾಯ್ಕ್, ಚಂದ್ರಾವತಿ ಗೆಜ್ಜೆಗಿರಿನಗರ, ಹೇಮಲತಾ, ಗುತ್ತಿಗೆದಾರ ಪದ್ಮನಾಭ ವೀರಕಂಭ ಉಪಸ್ಥಿತರಿದ್ದರು. ಬಿ.ಕೆ.ಅಣ್ಣಿಪೂಜಾರಿ ಸ್ವಾಗತಿಸಿ ವಂದಿಸಿದರು.
