ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು 2012ರ ಡಿಸೆಂಬರ್‌ 16ರ ರಾತ್ರಿ ದೆಹಲಿಯಲ್ಲಿ ನಡೆದ ಆ ಘಟನೆ. ದೆಹಲಿಯ ಅರೆವೈದ್ಯಕೀಯ ವಿದ್ಯಾರ್ಥಿನಿ 23 ವರ್ಷದ ನಿರ್ಭಯಾ ಮೇಲೆ ಚಲಿಸುತ್ತಿದ್ದ ಬಸ್‌ನಲ್ಲಿ ಆರು ವ್ಯಕ್ತಿಗಳು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ಮಾಡಿ ರಸ್ತೆಗೆ ಎಸೆದಿದ್ದರು. ಈ ಹ್ಯೇಯ ಕೃತ್ಯ ನಡೆದು ಏಳು ವರ್ಷವಾದ ಮೇಲೆ ಕೊನೆಗೂ ಇದೇ ಬರುವ ಜನವರಿ 22ರಂದು ಬೆಳಿಗ್ಗೆ 7 ಗಂಟೆಗೆ ಅಪರಾಧಿಗಳಿಗೆ ಮರಣದಂಡನೆಯನ್ನು ನೀಡುವಂತೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸತೀಶ್‌ ಕುಮಾರ್‌ ಅರೋರಾ ಅವರು ಆದೇಶಿಸಿದ್ದಾರೆ.

835210-nirbhaya

ನಿರ್ಭಯಾ ಹೆತ್ತವರು ಈ ಕೃತ್ಯದ ಅಪರಾಧಿಗಳಾದ ಅಕ್ಷಯ್‌, ಮುಕೇಶ್‌, ಪವನ್‌ ಮತ್ತು ವಿಜಯ್‌ಗೆ ಮರಣದಂಡನೆಯನ್ನು ತ್ವರಿತವಾಗಿ ಜಾರಿ ಮಾಡಬೇಕು,ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಗಲ್ಲು ಶಿಕ್ಷೆಯನ್ನು ವಿಳಂಬ ಮಾಡಲು ಅಪರಾಧಿಗಳು ತಂತ್ರ ಮಾಡುತ್ತಿದ್ದಾರೆ. ಮರಣದಂಡನೆಯನ್ನು ಸುಪ್ರೀಂ ಕೋರ್ಟ್‌ ಹಿಡಿದಿದೆ. ಅವರ ಮರುಪರಿಶೀಲನಾ ಅರ್ಜಿಯನ್ನು ಕೂಡ ವಜಾ ಮಾಡಲಾಗಿದೆ ಎಂದು ನಿರ್ಭಯಾ ಹೆತ್ತವರ ವಕೀಲ ಕೆ.ಕೆ. ಝಾ ಹೇಳಿಕೆಯನ್ನ ನೀಡಿದಾರೆ.

nirbhaya-convicts-1575877619

ಈಗಾಗಲೆ ತಿಹಾರ್‌ ಜೈಲಿನಲ್ಲಿರುವ ಅಪರಾಧಿಗಳು ಸುಪ್ರೀಂ ಕೋರ್ಟ್‌ನಲ್ಲಿ ಪರಿಹಾರಾತ್ಮಕ ಅರ್ಜಿ ಮತ್ತು ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಸಿದ್ದರು, ಈ ಅರ್ಜಿ ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇಲ್ಲ ಎಂದು ದೆಹಲಿ ಸರ್ಕಾರದ ಪರ ವಕೀಲ ರಾಜೀವ್‌ ಮೋಹನ್‌ ಅವರು ನಿರ್ಭಯಾ ಹೆತ್ತವರ ಅರ್ಜಿಗೆ ಬೆಂಬಲ ಸೂಚಿಸಿದ್ದಾರೆ. ರಾಷ್ಟ್ರಪತಿಯ ಮುಂದೆಯೂ ಅಪರಾಧಿಗಳ ಅರ್ಜಿಗಳು ಬಾಕಿ ಇಲ್ಲ. ಹಾಗಾಗಿ, ಮರಣದಂಡನೆ ಜಾರಿ ಆದೇಶ ನೀಡಲು ಯಾವ ತೊಂದರೇನು ಇಲ್ಲ. ಅಪರಾಧಿಗಳು ಯಾವುದೇ ಅರ್ಜಿ ಸಲ್ಲಿಸಲು ಬಯಸಿದರೆ, ಮರಣದಂಡನೆ ಜಾರಿ ಆದೇಶ ಮತ್ತು ಅದರ ಜಾರಿಯ ನಡುವಣ ಅವಧಿಯಲ್ಲಿ ಸಲ್ಲಿಸಲು ಅವಕಾಶ ಇದೆ ಎಂದು ಮೋಹನ್‌ ಅವರು ಹೇಳಿದ್ದಾರೆ. ನಿರ್ಭಯ ಪ್ರಕರಣದ ಅಪರಾದಿಗಳಿಗೆ ಮರಣದಂಡನೆ ವಿಧಿಸಿದ್ದು ಇಡೀ ದೇಶದ ಹೆಣ್ಣುಮಕ್ಕಳಿಗೆ ನ್ಯಾಯ ಒದಗಿಸಿದಂತಾಗಿದೆ.

By suddi9

Leave a Reply

Your email address will not be published. Required fields are marked *