ಕೈಕಂಬ: ಕಿಲೆಂಜಾರು ಗ್ರಾಮದ ರಾಜನ್ ದೈವ ಕೊಡಮಣಿತ್ತಾಯ ದೈವದ ಕುಪ್ಪೆಪದವು ಗಡುಸ್ಥಳದಲ್ಲಿ ದೊಂಪದಬಲಿ ನೇಮೋತ್ಸವವು ಜನವರಿ ಒಂದರ ಬುಧವಾರ ನಡೆಯಲಿದೆ. ಬೆಳಿಗ್ಗೆ 10:30ಕ್ಕೆ ಕುಂಟ ಮುಹೂರ್ತ ಹಾಗೂ ಚಪ್ಪರ ಮುಹೂರ್ತ. ಸಂಜೆ 4:30ಕ್ಕೆ ಕಿಲೆಂಜಾರು ಅರಮನೆಯಿಂದ ಭಂಡಾರ ಹೊರಡಲಿದ್ದು, ರಾತ್ರಿ 8 ಕ್ಕೆ ನೇಮೋತ್ಸವ ನಡೆಯಲಿದೆ. ಕಿಲೆಂಜಾರು ಅರಮನೆಯಿಂದ ಗಡುಸ್ಥಳದವರೆಗೆ ಧರಿದೀಪಗಳನ್ನು ಬೆಳಗಿಸಲಾಗುತ್ತದೆ. ರಾತ್ರಿ ಅನ್ನ ಸಂತರ್ಪಣೆ ನಡೆಯಲಿರುವುದು.
