ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಬಡಗಬೆಳ್ಳೂರಿನ ಶ್ರೀ ಮಣಿಕಂಠ ಭಜನಾ ಮಂದಿರ ಮಣಿಕಂಠಪುರ ಇದರ “14 ನೇ ವರ್ಷದ ಭಜನಾ ಸಂಕೀರ್ತನೆಯು” ಜ.4 ರಂದು ಶನಿವಾರ ಸೂರ್ಯಹಸ್ತದಿಂದ ಮರುದಿನ ಬೆಳಗ್ಗೆ ಸೂರ್ಯೋದಯದವರೆಗೆ ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.manikanta mandira

ಪೊಳಲಿ ರಾಮಕೃಷ್ಣತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರ ಆಶೀರ್ವಾದದೊಂದಿಗೆ (ದುರ್ಗಾವಾಹಿನಿ ವಿ.ಹಿಂಪ ರಾಜ್ಯ ಸಂಯೋಜಕಿ ವಿದ್ಯಾ ಮಲ್ಯ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಜ. 5 ರಂದು ಭಾನುವಾರ ಬೆಳಗ್ಗೆ 8.30 ರಿಂದ ಅಯ್ಯಪ್ಪ ಸ್ವಾಮಿ ವೃತದಾರಿಗಳಿಗೆ ಹಿರುಮುಡಿ ಕಟ್ಟುವ ಕಾರ್ಯಕ್ರಮ ಮಧ್ಯಾಹ್ನ 12.30ಕ್ಕೆ “ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ” ನಡೆಯಲಿದೆ ಎಂದು ಮಣಿಕಂಠ ಭಜನಾ ಮಂದಿರದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *