ಬಂಟ್ವಾಳ: ನಿಶ್ವಾರ್ಥ ಮನೋಬಾವದಿಂದ ಬಡ ವರ್ಗದ ಜನರ ಕಣ್ಣೀರೊರಸುವ ಕೆಲಸವನ್ನು ಅಧಿಕಾರಿಗಳು ಮಾಡಿದಾಗ , ನಿವೃತ್ತಿಯ ನಂತರವೂ ಜನ ಗುರುತಿಸುತ್ತಾರೆ, ಎಂದು ತಾ.ಪಂ.ಅಧ್ಯಕ್ಷ ಯಶವಂತ ಡಿ. ಹೇಳಿದರು.

ಅವರು ತಾ.ಪಂ.ನಲ್ಲಿ ನಿವೃತ್ತಿ ಹೊಂದಿದ ಪಂಚಾಯತ್ ಅಭಿವೃದ್ದಿ ಅಧಿಕಾರಿ ಗಣಪತಿ ಮುಚ್ಚಿನ್ನಾಯ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧಿಕಾರಿಗಳು ಸಾಮಾಜಿಕ ಕಳಕಳಿಯೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಸಿಗುವ ಜನರ ಆಶರ್ೀವಾದಕ್ಕಿಂತ ಗೌರವ ಇನ್ನೋಂದಿಲ್ಲ ಎಂದರು. ನಿವೃತ್ತ ಪಂ.ಅಭಿವೃದ್ದಿ ಅಧಿಕಾರಿ ಗಣಪತಿ ಮುಚ್ಚಿನ್ನಾಯ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿರು. ವೇದಿಕೆಯಲ್ಲಿ ಕಾರ್ಯನಿರ್ವಹಾಣಾಧಿಕಾರಿ ಸಿಪ್ರೀಯಾನ್ ಮಿರಾಂದ, ಸಹಾಯಕ ನಿದರ್ೇಶಕಿ ದಯಾವತಿ, ಪಂ.ನೌತರರ ಸಂಘದ ಅಧ್ಯಕ್ಷ ಗೊಕುಲ್ ದಾಸ್ ಭಕ್ತ ಮತ್ತು ಕುಶಲಪ್ಪ ಉಪಸ್ಥಿತರಿದ್ದರು. ಪಂ.ಅಭಿವೃದ್ದಿ ಅಧಿಕಾರಿ ವಿಜಯ ಶಂಕರ್ ಆಳ್ವ ಸ್ವಾಗತಿಸಿ, ತಾ.ಪಂ ವ್ಯವಸ್ಥಾಪಕ ನಾಗೇಶ್ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
