ಬಂಟ್ವಾಳ: ಬಿ.ಸಿ.ರೋಡಿನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವು ಶಾಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆಯಿತು.ಶಾಲಾ ಸಂಚಾಲಕಿ ಧನಭಾಗ್ಯ ಆರ್ .ರೈ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಶಾಲಾ ಆಡಳಿತಾಧಿಕಾರಿ ಮಹಾಬಲ ಆಳ್ವ,ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಕಿಶೋರ್ ಭಂಡಾರಿ, ಉಪಾಧ್ಯಲ್ಷೆವಸಿ.ಎಚ್.ಬೇಬಿ, ಶಾಲಾ ಸಮಿತಿ ಪದಾಧಿಕಾರಿಣಿ ಕ್ಷಮಾ ಭಂಡಾರಿ,ಕ್ರೀಡಾ ಕಾರ್ಯದರ್ಶಿ ರಾಜಾರಾಮ ಕುಲಾಲ್,ಸದಸ್ಯೆ ಜೀನತ್,ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯಿನಿ ಸುನೀತಾ,ಶಾಲಾ ನಾಯಕಿ ಸಾನಿಧ್ಯ.ಕೆ.ಭಂಡಾರಿ ಉಪಸ್ಥಿತರಿದ್ದರು.ವಿದ್ಯಾ ಸ್ವಾಗತಿಸಿ,ಸುನೀತಾ ವಂದಿಸಿದರು.ಆಶಾಲತಾ ನಿರೂಪಿಸಿದರು.
