ಒಂಟಿ ಕಾಗೆಯೊಂದು ಮನೆ ಮಂದಿಯೊಂದಿಗೆ ಬಾಂಧವ್ಯ ಬೆಳಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಇದೇನು ಸಾಕಿದ ಕಾಗೆಯಲ್ಲ.. ಪರಿಸರದ ಮಡಿಲಲ್ಲಿ ವಾಸವಾಗಿರುವ ಕಾಗೆಯಾಗಿದೆ. ಕಾಪು ಮೂಲದ ಶ್ರೀಮತಿ ಆಶಾ, ಶೇಖರ ದೇವಾಡಿಗ ದಂಪತಿಗಳು ಮುಂಬೈ ಜೋಗೇಶ್ವರದಲ್ಲಿ ನೆಲೆ ಕಂಡಿದ್ದಾರೆ. ಇವರ ಮನೆಗೆ ಕಳೆದ ಒಂದು ವರ್ಷಗಳಿಂದ ಒಂಟಿ ಕಾಗೆಯೊಂದು ನಿತ್ಯವು ಬರಲಾರಂಭಿಸಿದೆ.
ಈ ಕಾಗೆ ಅಡಿಗೆ ಮನೆಯೊಳಗೆ ಭಯ ಪಡದೆ ತಾನಾಗಿಯೇ ಪ್ರವೇಶ ಪಡೆಯುತ್ತದೆ. ಮನೆ ಮಂದಿ ನೀಡಿದ ಕೈ ತುತ್ತು ಸವಿಯುತ್ತದೆ. ಮೈ ಸವರಿದರೆ ಖುಷಿ ಪಡುತ್ತದೆ. ಮಾತಿಗೂ ಸ್ಪಂದಿಸುತ್ತದೆ. ಬೆಳಿಗ್ಗಿನ ಜಾವದಲ್ಲಿ ಸರಿಯಾದ ಸಮಯಕ್ಕೆ ಮನೆಗೆ ಬರುವ ಈ ಕಾಗೆಗೆ ಮನೆ ಮಂದಿಯ ಕೈ ತುತ್ತೆ ಆಗ ಬೇಕಂತೆ, ಆಹಾರ ನೀಡಲು ತಡ ಮಾಡಿದರೆ ಕಾ..ಕಾ ಎಂದು ಬೊಬ್ಬಿಡುತ್ತಲೇ ಇರುತ್ತದೆಯಂತೆ.
ಆಹಾರ ನೀಡಿದಾಗಲೇ ಕಾಗೆಯು ಕೂಗಾಟವನ್ನು ನಿಲ್ಲಿಸುತ್ತದೆಯಂತೆ, ಮನುಷ್ಯ ಸೇವಿಸುವ ಎಲ್ಲಾ ಆಹಾರ, ಮತ್ತು ಧಾನ್ಯಗಳನ್ನು ಈ ಕಾಗೆ ಸೇವಿಸುತ್ತದೆ. ಉದರ ಹಸಿವು ನಿಗಿಸಿಕೊಂಡ ಬಳಿಕ ಪರಿಸರದಲ್ಲಿಯೇ ಕಾಗೆಯ ಬದುಕು ಸಾಗುತ್ತದೆ. ಈ ವಿಸ್ಮಯ ಸುದ್ಧಿಯನ್ನು ಮುಂಬೈಯ ಶ್ರೀಮತಿ ಆಶಾ ದೇವಾಡಿಗ ಅವರ ಸಹೋದರ ರಾಜೇಶ್ ದೇವಾಡಿಗ ಕಾಪು ಅವರು ನೀಡಿದ್ದಾರೆ.
ತಾರಾನಾಥ್ ಮೇಸ್ತ ಶಿರೂರು.

