ಮಂಗಳೂರು: ಮಹಾನಗರ ಪಾಲಿಕೆ ಯ 33 ನೇ ಕದ್ರಿ ದಕ್ಷಿಣ ವಾರ್ಡ್ ನಿಂದ ಮೇವಿಸ್ ರೊಡ್ರಿಗ್ರಸ್ ಹಲವೆಡೆ ಪ್ರಚಾರ ನಡೆಸಿ ಮತ ಯಾಚಿಸಿದರು. ಶಾಲಾ ದಿನದಿಂದಲೆ ನಾಯಕತ್ವದ ಗುಣ ಬೆಳೆಸಿರುವ ಇವರ ಮಗ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಮೆದ್ರಾಸ್ ರೆಜಿಮೆಂಟ್ ಸೇವೆ ಸಲ್ಲಿಸುತ್ತಿದ್ದಾರೆ.
ಸುಶಿಕ್ಷಿತ ಶಿಕ್ಷಕಿಯಾಗಿ ಗರ್ಲ್ ಗೈಡಿಂಗ್ ನಾಯಕಿಯಾಗಿ ಪಾದುವ ಹೈಸ್ಕೂಲ್ ಅಮೃತೋತ್ಸವ ಆಚರಣಾ ಸಮಿತಿ ಅಧ್ಯಕ್ಷೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಜನರ ಸಮಸ್ಯೆ ಗೆ ಸೂಕ್ತ ಸ್ಪಂದನೆ ನೀಡಲು ಸ್ವಚ್ಛ ವಾರ್ಡ್, ವಾಕ್ ವೇ ನಿರ್ಮಾಣ,ಮಿನಿ ಉದ್ಯಾನ ನಿರ್ಮಾಣ ಕ್ಕೆ ಆದ್ಯತೆ ನೀಡುವ ಕನಸನ್ನು ಹೊತ್ತು ಇದೀಗ ಹಲಾವಾರು ಬೆಂಬಲಿಗರೊಂದಿಗೆ ಬಿರುಸಿನ ಪ್ರಚಾರಕೈಗೊಂಡಿದ್ದಾರೆ.

