ಉಳ್ಳಾಲ: ಇಲ್ಲಿನ ಶ್ರೀಕ್ಷೇತ್ರ ಸೋಮೇಶ್ವರ ದೇವಸ್ಸಾನದ ಜೀರ್ಣೋದ್ದಾರ ಕಾರ್ಯಕ್ಕೆ ಗಾಳದ ಕೊಂಕಣಿ ಸಮುದಾಯದ ಪರವಾಗಿ ಒಂದು ಲಕ್ಷ ರೂ.ವಿನ ಧನಸಹಾಯದ ಚೆಕ್ ನ್ನು ಸೋಮವಾರ ದೇವಳದ ಜೀರ್ಣೋದ್ದಾರ ಸಮಿತಿಗೆ ಹಸ್ತಾಂತರಿಸಲಾಯಿತು. ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ ಅವರು ಚೆಕ್ ನ್ನು ದೇವಳದ ಜೀರ್ಣೋದ್ದಾರ ಸಮಿತಿಯ ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಧಾಕರ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ದಲ್ಲಿ ಶ್ರೀಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯಕ್,ಪ್ರ.ಕಾರ್ಯದರ್ಶಿ ಯು.ದಯಾನಂದ ನಾಯಕ್,ಕಾರ್ಯಾಧ್ಯಕ್ಷ ಶಿವಾನಂದ ಎಸ್.ನಾಯಕ್, ಕೋಶಾಧಿಕಾರಿ ಧರ್ಮಪಾಲ್ ನಾಯಕ್ ಪಂಪ್ ವೆಲ್, ಸೋಮನಾಥ ಉಳಿಯ ಶ್ರೀ ಅರಸು,ಧೂಮಾವತಿ ಬಂಟ ದೈವಸ್ಥಾನದ ಮಧ್ಯಸ್ಥರಾದ ರಾಮ ಎಸ್.ನಾಯಕ್, ಗಾಳದ ಕೊಂಕಣಿ ಅಭ್ಯುದಯ ಸಂಘದ ಉಪಾಧ್ಯಕ್ಷ ರಂಜನ್ ಎಂ. ನಾಯಕ್,ಕೋಶಾಧಿಕಾರಿ ಚಂದ್ರಶೇಖರ್ ಬಪ್ಪಾಲ್, ಸದಸ್ಯರಾದ ಮಿಥಿಲೇಶ್,ಕೋಡಿ ಜಯ ನಾಯಕ್,ಶ್ರೀರಿಷ್ ಕಾಫಿಕಾಡ್,ಜಯಶೀಲ ಯು.ನಾಯಕ್ ,ಶ್ರೀ ಸೋಮೇಶ್ವರೀ ಸೌ.ಸ.ನಿಯಮಿತದ ಅಧ್ಯಕ್ಷ ಉಮಾನಾಥ್ ನಾಯಕ್ ಉಳ್ಳಾಲ, ಶ್ರೀಸೋಮೇಶ್ವರೀ ಮಹಿಳಾ ಮಂಡಲದ ಅಧ್ಯಕ್ಷೆ ಕಸ್ತೂರಿ ಆರ್. ನಾಯಕ್,ಮಾಜಿ ಅಧ್ಯಕ್ಷೆ ಹೇಮಾ ಮಂಕಿಸ್ಟ್ಯಾಂಡ್ ಮೊದಲಾದವರು ಉಪಸ್ಥಿತರಿದ್ದರು.ಇದಕ್ಕು ಮೊದಲು ಶ್ರೀ ಸೋಮನಾಥೇಶ್ವರ ದೇವರಿಗೆ ಸಮುದಾಯದಿಂದ ವರ್ಷಂಪ್ರತಿ ನಡೆಯುವಂತೆ ಸಾಮೂಹಿಕ ಬೊಂಡಾಭೀಷೇಕ , ವಿವಿಧ ಪೂಜೆ, ವೈಧಿಕ ವಿಧಿ ವಿಧಾನಗಳು.ಕ್ಷೇತ್ರದ ಪ್ರಧಾನ ಆರ್ಚಕರಾದ ಸೂರ್ಯನಾರಾಯಣ ಹೊಳ್ಳ ಅವರ ನೇತೃತ್ವದಲ್ಲಿ ನಡೆಯಿತು.
