ಬಂಟ್ವಾಳ:   ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆಯಿತು. ಮಾನವನನ್ನು ದಾನವನನ್ನಾಗಿ ಮಾಡುವುದೇ ಮಾದಕ ವ್ಯಸನ ಇಂತಹ ಮಾದಕ ವ್ಯಸನದಿಂದ ಸಮಾಜ ಮುಕ್ತವಾಗಬೇಕಾದರೆ ಮೊದಲು ತನ್ನನ್ನು ತಾನು ವ್ಯಸನದಿಂದ ದೂರವಿರುವಂತೆ ಮನಸ್ಸನ್ನು ಹತೋಟಿಯಲ್ಲಿಡಬೇಕು. ಇದರಿಂದ ಮಾತ್ರ ಇಡೀ ಸಮಾಜವನ್ನು ಸ್ವಾಸ್ಥ್ಯ ಸಮಾಜವನ್ನಾಗಿಸಬಹುದು ಎಂದು ನಿವೃತ್ತ ಆರೋಗ್ಯ ಮೇಲ್ವಿಚಾರಕರಾದ ಜಯರಾಮ ಪೂಜಾರಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

swasthya sankalpa picಇವರು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಟ್ಲ ವಲಯದ ಯೋಜನಾಧಿಕಾರಿ ಮೋಹನ್, ಕಲ್ಲಡ್ಕ ವಲಯದ ಜನಜಾಗೃತಿಯ ಅಧ್ಯಕ್ಷರಾದ ಜಯಂತಿ ಪೂಜಾರಿ, ಜನಜಾಗೃತಿ ಸದಸ್ಯರಾದ ವೆಂಕಟರಮಣ ಪ್ರಭು, ಸೇವಾ ಪ್ರತಿನಿಧಿಯಾದ ಸುಜಾತ, ಶ್ರೀರಾಮ ಪ್ರೌಢಶಾಲಾ ಮುಖ್ಯಶಿಕ್ಷಕಿಯಾದ ವಸಂತಿಕುಮಾರಿ, ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹಶಿಕ್ಷಕರಾದ ವಿನೋದ್ ಶೆಟ್ಟಿ ಸ್ವಾಗತಿಸಿ, ಕಲ್ಲಡ್ಕ ವಲಯದ ಮೇಲ್ವಿಚಾರಕ ಪ್ರೇಮ ವಂದಿಸಿದರು.

By suddi9

Leave a Reply

Your email address will not be published. Required fields are marked *