ಬಂಟ್ವಾಳ: ಹಿಂದೂ ಜಾಗರಣ ವೇದಿಕೆ ಕಡೇಶಿವಾಲಯ ಹಾಗೂ ಶ್ರೀ ರಾಮ ಭಜನಾ ಮಂದಿರ ಪ್ರತಾಪನಗರದ ಆಶ್ರಯದಲ್ಲಿ ದೀಪಾವಳಿ ಕ್ರೀಡೋತ್ಸವ ನಡೆಯಿತು. ಕಡೇಶಿವಾಲಯದ ಅಧ್ಯಾಪಕರಾದ ಭಾಸ್ಕರ್ ನಾಯ್ಕ್ ದೀಪ ಬೆಳಗಿಸಿ ಕ್ರೀಡೋತ್ಸವ ಹಾಗೂಕಾರ್ತಿಕ್ ಮೇರ್ಲ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಲಗೋರಿ ಪಂದ್ಯಾಟ, ಬಾಲಕರ ಕಬ್ಬಡ್ಡಿ..ಬಾಲಕಿಯರ ಒಂಟಿಕಾಲಿನ ಓಟ,ಕೆರೆದಡ,ಸಂಗೀತ ಕುರ್ಚಿ,ಕುಸ್ತಿ, ತಪ್ಪಾಂಗಾಯಿ,ಪುರುಷರ ಗುಂಡೆಸೆತ,ಕಬ್ಬಡಿ,ಹಗ್ಗ-ಜಗ್ಗಾಟ ಮೊದಲಾದ ಸ್ಪರ್ಧೆ ಗಳು ನಡೆಯಿತು.
ಬಳಿಕ ತುಳಸಿಪೂಜೆ , ಗೋಪೂಜೆ,ಭಾರತ ಮಾತಾ ಪೂಜನವು ನೆರವೇರಿತು ಹಿಂದೂ ಜಾಗರಣ ವೇದಿಕೆ ಮುಖಂಡರಾದ ರಾಧಾಕೃಷ್ಣ ಅಡ್ಯಂತಾಯ,ನರಸಿಂಹ ಮಾಣಿ,ಗಣರಾಜ್ ಭಟ್ ಕೆದಿಲ,ಅರುಣ, ಗಣಪತಿ ಭಟ್, ಮನೋಜ್ ಪೆರ್ನೆ,ವಿಟ್ಲ ಪ್ರಖಂಡ ಭಜರಂಗದಳ ಸಂಚಾಲಕ ಅಕ್ಷಯ ರಜಪೂತ್ ,ಮಂಗಳೂರು ಹಿಂದೂ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಆರ್ ಶೆಟ್ಟಿ ಅಡ್ಯಾರ್ ಪದವು, ಬಿಜೆಪಿ ಮುಖಂಡ ದಿನೇಶ್ ಅಮ್ಟೂರು ,ನಿವೃತ್ತ ಸೈನಿಕರಾದ ಜಗನ್ನಾಥ್ ಮಾಣಿ .ಮೋರಸ್ ಅನಂತಾಡಿ, ಅಮೃತಸಂಜೀವಿನಿ ಸೇವಾಸಂಸ್ಥೆಯ ಸದಸ್ಯರು,ಗ್ರಾಮದ ವಿವಿಧ ಸಂಘಟನೆಗಳ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು. ಸಂಜೀವಿನಿ ಸದಸ್ಯ ಅಲೋಕಿತ್ ಶೆಟ್ಟಿ ರ ಹುಟ್ಟುಹಬ್ಬದ ಪ್ರಯುಕ್ತ ಆಯ್ದ ಬಡಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಬಡ್ಡಿ ತರಬೇತುದಾರ ದೀಪಕ್ ಬೋಳಂತೂರು ರವರನ್ನು ಸನ್ಮಾನಿಸಲಾಯಿತು. ಮನ್ಮಥ ಶೆಟ್ಟಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಜೊತೆಗೆ ಸೆಲ್ಫೀ ವಿಥ್ ಗುರುಸ್ವರೂಪಿ ಸ್ಪರ್ಧೆಯೂ ಯಶಸ್ವಿಯಾಗಿ ಸಂಪನ್ನಗೊಂಡಿತು.

