ವಾಮಂಜೂರು : ಮಂಗಳೂರು ಮಹಾನಗರ ಪಾಲಿಕೆಗೆ(ಮನಪಾ) ನವಂಬರ್ 12ರಂದು ನಡೆಯಲಿರುವ ಚುನಾವಣೆಯಲ್ಲಿ ಪಾಲಿಕೆಯ ತಿರುವೈಲು ವಾರ್ಡ್‍ನಿಂದ(20ನೇ ವಾರ್ಡ್) ಸ್ಪರ್ಧಿಸಲಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ರಾಜಕುಮಾರ್ ಶೆಟ್ಟಿಯವರು ಗುರುವಾರ ಬೆಳಿಗ್ಗೆ ವಾಮಂಜೂರಿನಲ್ಲಿರುವ ಗುರುಪುರ ವ್ಯವಸಾಯ ಸೇವಾ ಸಹಕಾರ ಸಂಘದ ಎದುರು ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿ, ಮಂಗಳಜ್ಯೋತಿವರೆಗೆ ಮೆರವಣಿಗೆಯಲ್ಲಿ ಸಾಗಿ, ನಾಮಪತ್ರ ಸಲ್ಲಿಸಲು ಮಂಗಳೂರು ಪಾಲಿಕೆಯತ್ತ ತೆರಳಿದರು.

DSC_6117

DSC_6156

ಈ ವೇಳೆ ಅಭ್ಯರ್ಥಿ ಜೊತೆಯಲ್ಲಿ ಮಾಜಿ ಶಾಸಕ ಮೊೈದಿನ್ ಬಾವ, ಕೆಪಿಸಿಸಿ ಸದಸ್ಯ ಪೃಥ್ವಿರಾಜ್ ಆರ್ ಕೆ, ಗುರುಪುರ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯರಾದ ಸಚಿನ್ ಅಡಪ, ಸುನಿಲ್ ಜಿ, ಶ್ರೀಧರ ನೀರುಮಾರ್ಗ, ಕಾಂಗ್ರೆಸ್ ಮುಖಂಡರಾದ ಕೃಷ್ಣ ಕೋಟ್ಯಾನ್ ಪರಾರಿ, ಗಿರೀಶ್ ಆಳ್ವ, ಯಶವಂತ ಶೆಟ್ಟಿ, ಬಾಷಾ ಗುರುಪುರ, ಎ ಕೆ ಅಶ್ರಫ್, ಹರೀಶ್ ಭಂಡಾರಿ, ಕೃಷ್ಣ ಅಮೀನ್ ಗಂಜಿಮಠ, ಬಾಲಕೃಷ್ಣ ವಾಮಂಜೂರು, ಜಯಶೀಲ ಅಡ್ಯಂತಾಯ, ವಿನಯ ಕುಮಾರ್ ಶೆಟ್ಟಿ, ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ನವೀನ್‍ಚಂದ್ರ ಶೆಟ್ಟಿ ತಿರುವೈಲುಗುತ್ತು, ಗಣೇಶ್ ಪೂಜಾರಿ, ಸದಾಶಿವ ಶೆಟ್ಟಿ ಕಲ್ಲಕಲ್ಲೆಂಬಿ, ಸದಾಶಿವ ಅಮೀನ್ ವಾಮಂಜೂರು, ಐತಪ್ಪ ಪೂಜಾರಿ, ಪಿ ಶೇಖಬ್ಬ, ಜಯಂತಿ ಡಿ. ಅಮೀನ್, ಲಕ್ಷ್ಮೀ ತಿರುವೈಲು, ಜಯಲಕ್ಷ್ಮೀ ಶೆಟ್ಟಿ, ಕಾರ್ಮಿಲ್ ಲೋಬೊ, ಮೊಹಮ್ಮದ್ ಉಂಞ, ರೋಶನ್ ಅಲ್ಮೇಡ, ಅಬ್ದುಲ್ಲ, ರಜಾಕ್ ಮೂಡುಶೆಡ್ಡೆ, ಜಿತೇಂದ್ರ ಅಂಚನ್ ಪರಾರಿ, ಚೇತನ್ ಕುಮಾರ್, ಸದಾಶಿವ ಶೆಟ್ಟಿ ಮಂಜೊಟ್ಯ, ಶೋಧನ್ ಮೊದಲಾದವರಿದ್ದರು.

 

By suddi9

Leave a Reply

Your email address will not be published. Required fields are marked *