ಬಡಗಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಹಿರಿಯಪ್ರಾಥಮಿಕ ಶಾಲೆಯ ಶತಮಾನೋತ್ಸವದ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸವು ಅ.30ರಂದು ಬುಧವಾರ ನೆರವೇರಿತು. ಕಾವೇಶ್ವರ ದೇವಸ್ಥಾನದ ಅರ್ಚಕ ಪ್ರಕಾಶ್ ಭಟ್ ಪೂಜಾವಿಧಿವಿಧಾನಗಳನ್ನು ನೆರವೇರಿಸಿದರು.
ಶಾಲಾ ಸಂಚಾಲಕ ನರೇಂದ್ರ ಭಂಡಾರಿ, ಕಟ್ಟಡ ಸಮಿತಿ ಅಧ್ಯಕ್ಷ ಪರಕೂರು ಬಾಲಕೃಷ್ಣ ಭಂಡಾರಿ, ಗೌರವಾಧ್ಯಕ್ಷ ಸುಧಾಕರ ಪೂಂಜ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಚಿಂದ್ರನಾಥ್ ಶೆಟ್ಟಿ, ಗೌರವಧ್ಯಕ್ಷ ರಘು ಎಲ್ ಶೆಟ್ಟಿ, ಬಡಗಬೆಳ್ಳೂರು ಶಾಲಾ ನಿವೃತ ಮುಖ್ಯೋಪದ್ಯಾಯರಾದ ವಿಷ್ಣುಮೂರ್ತಿ ಭಟ್, ಸಂಕಪ್ಪ ಶೆಟ್ಟಿ ,ಸೀತಾರಾಮ ಪೂಂಜ, ದೇವಪ್ಪ ಪೂಜಾರಿ,ವಸಂತ ಪೂಜಾರಿ, ಹಾಗೂ ಶಾಲಾ ಮುಖ್ಯೊಪದ್ಯಾಯ ಕೇಶವ ನಾಯ್ಕ್ ಶಾಲಾ ಶಿಕ್ಷಕರು ,ನಿವೃತ ಶಿಕ್ಷಕರು , ಈಶ್ವಂಬರ ವರಕೋಡಿ , ಬಾಲಕೃಷ್ಣ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
