ಉಡುಪಿ: ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ವ್ಯಾಪರಸ್ಥರು ಸ್ಥಳ ಆಯ್ದುಕೊಳ್ಳಲು ಗುರುತಿಗಾಗಿ ಪೆಟ್ಟಿಗೆಗಳನ್ನು ಇಟ್ಟಿದ್ದು. ಇದರಿಂದ ರಥಬೀದಿಯ ಅಂದವು ಕೆಟ್ಟಿದೆ, ಸಾರ್ವಜನಿಕರು, ಭಕ್ತಾದಿಗಳು ನಡೆದಾಡಲು ತೊಂದರೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಹೂವು, ಹಣತೆ, ಹಣ್ಣ ಹಂಪಲು, ಮೊದಲಾದ ವ್ಯಾಪರಸ್ಥರು ಮುಂಚಿತವಾಗಿ ಸ್ಥಳ ಕಾಯ್ದಿರಿಸಿರುವ ಕುರುಹುಗಳು ಇವೆಂದು ತಿಳಿದು ಬಂದಿದೆ. ದೀಪಾವಳಿಗೆ ಹಲವು ದಿನಗಳು ಇರುವಾಗಲೇ ಈ ಸ್ಥಳ ಆಯ್ಕೆ ಸರಿಯಲ್ಲ ಎನ್ನುವುದು ನಾಗರಿಕರ ಅರೋಪವಾಗಿದೆ.

f9cda4dd-6eca-4ded-8bc7-57dfa8b84dc3ಈ ಪೆಟ್ಟಿಗೆಗಳು ರಥಬೀದಿಯಲ್ಲಿ ಕಳೆದ ಹದಿನೈದು ದಿನಗಳಿಂದ ಕಂಡು ಬಂದಿವೆ. ಈ ಪೆಟ್ಟಿಗೆಗಳಿಗೆ ಬೀದಿ ನಾಯಿಗಳಲ್ಲವು ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡು ಬಂದಿದೆ. ನಾಳೆಯ ದಿನಗಳಲ್ಲಿ ಇದೇ ಪೆಟ್ಟಿಗೆಗಳಲ್ಲಿ ಪೂಜಾ ಸಾಮಾಗ್ರಿಗಳ ಪೂಜಾ ಸಾಮಾಗ್ರಿಗಳ ಹಾಕಿ ಮಾರಟ ಮಾಡಿ, ಪೂಜಾ ವಿಧಿ ವಿಧಾನಗಳಿಗೆ ಧಕ್ಕೆ ತರುವ ಸಾಧ್ಯತೆಯು ಇರುತ್ತದೆ. ಬೆಳಗಿನ ಜಾವ ಸ್ವಾಮಿಜಿಗಳು ಕೃಷ್ಣಮಠದ ದೇವರ ದರ್ಶನಕ್ಕೆ ಹೋಗುವ ಸಂದರ್ಭವು ಇರುತ್ತದೆ. ನಸುಕಿನ ಕತ್ತಲಲ್ಲಿ ಪೆಟ್ಟಿಗೆಗಳು ಗೋಚರಕ್ಕೆ ಬಾರದೆ ಎಡವಿ ಬೀಳುವ ಸಾಧ್ಯತೆಯು ಇದೆ. ನಗರಸಭೆಯವರು ತಕ್ಷಣ ಜನಸಂಚಾರಕ್ಕೆ ಅಡಚಣೆಯಾಗುವ ರಥಬೀದಿಯಲ್ಲಿ ಹಾಕಿರುವ ಪೆಟ್ಟಿಗೆಗಳ ತೆರವುಗೊಳಿಸಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *