ಉಡುಪಿ :ದೀಪಾವಳಿಯ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿ‌ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಇವರ ವತಿಯಿಂದ ಪುರುಷೋತ್ತಮ‌ ಶೆಟ್ಟಿ ಸಹಕಾರದಲ್ಲಿ ಸುಮಾರು 5000 ಮಣ್ಣಿನ ಹಣತೆಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ಇಂದು ಶ್ರೀ ಕೃಷ್ಣ ಮಠದ ಮುಂಭಾಗದಲ್ಲಿ ವಿತರಿಸಲಾಯಿತು.
IMG-20191026-WA0053
ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಚಾಲನೆ ನೀಡಿ, ದೀಪಾವಳಿ ಎಂಬುದಾಗಿ ಬಡವರ ಹಬ್ಬವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ನೈಜ ಅರ್ಥದಲ್ಲಿ ಆಚರಿಸಬೇಕು. ದೇಶದಲ್ಲಿ ಉದ್ಭವಿಸಿರುವ ಅತಿವ್ರಷ್ಟಿಯ ನಿವಾರಣೆಯಾಗಿ ದೇಶವು ಸುಭಿಕ್ಷವಾಗಲಿ ಎಂದರು. ಈ ಸಂದರ್ಭದಲ್ಲಿ ಶ್ರೀಶ ಭಟ್ ಕಡೆಕಾರ್, ಕನ್ನರಪಾಡಿ ಜಯದುರ್ಗಾ ದೇವಳದ ಧರ್ಮದರ್ಶಿ ಕೃಷ್ಣಮೂರ್ತಿ ಆಚಾರ್ಯ, ಜಿಲ್ಲಾ ನಾಗರಿಕ ಸಮಿತಿ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸುಧಾಕರ ಒಳಕಾಡು, ಸತೀಶ್ ಕಲ್ಮಾಡಿ, ಡೇವಿಡ್, ಜಗದೀಶ್ ಶೆಟ್ಟಿ, ಗಣೇಶ್ ಪ್ರಸಾದ್, ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.
Attachments area

 

By suddi9

Leave a Reply

Your email address will not be published. Required fields are marked *