ಬಂಟ್ವಾಳ:ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲಿರುವ ವೈನ್ ಶಾಪ್ ಒಂದರಲ್ಲಿ ಬಿ.ಸಿ.ರೋಡಿನ ಮತ್ತು ಮಂಗಳೂರು ತಂಡದ ಬಿಯರ್ ಬಾಟ್ಲಿಯಲ್ಲಿ ಹೊಡೆದಾಡಿಕೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದ್ದು,ಬಿ.ಸಿ.ರೋಡ್ ತಂಡದ ಬಿಯರ್ ಬಾಟ್ಲಿ ಹೊಡೆತಕ್ಕೆ ಮಂಗಳೂರು ತಂಡದ ಯುವಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಡಿದ ಮತ್ತಿನಲ್ಲಿ ಉಭಯತಂಡದ ಯುವಕರಮಧ್ಯೆ ಮಾತಿಗೆ ಮಾತಿ ಬೆಳೆದು ಬಿಯರ್ ಬಾಟಲಿಯಲ್ಲಿ ಹೊಡೆದಾಡಿಕೊಂಡಿದ್ದು, ಬಿ.ಸಿ.ರೋಡಿನ ಶಶಿ ಮತ್ತಾತನೊಂದಿಗಿದ್ದ 15 ಮಂದಿ ಸೇರಿಕೊಂಡು ಬಾಟ್ಲಿಯಲ್ಲಿ ಹಲ್ಲೆಗೈದಿದ್ದಾರೆಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರುದಾಖಲಾಗಿದೆ.
ಮಂಗಳೂರು ನಿವಾಸಿಗಳಾದ ವಿದಾತ್ ಶೆಟ್ಟಿ, ಚರಣ್, ವಿಶಾಲ್ ರಾಜ್ ಮತ್ತು ವಿಠಲ ಕರ್ಕೇರ ಎಂಬವರು ಬಾಟಲಿ ಏಟು ತಿಂದಿದ್ದು, ವಿದಾತ್ ಶೆಟ್ಟಿ ಅವರ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.ವೈನ್ ಶಾಪ್ ನಲ್ಲಿ ಬಿ.ಸಿ.ರೋಡಿನ ಯುವಕರ ತಂಡ ಹಾಗೂ ಮಂಗಳೂರು ತಂಡದವರು ಬಿಯರ್ ಸೇವನೆಯಲ್ಲಿದ್ದಾಗ ಬಿ.ಸಿ.ರೋಡ್ ನ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದು,ಬಿ.ಸಿ.ರೋಡಿನ ಯುವಕರಿಗೆ ಬಿಸಿಯೇರಿದ್ದು,ಉಭಯ ತಂಡಗಳ ಮಧ್ಯ ವಾಗವಾದ ನಡೆದು ಬಳಿಕ ಅದು ಹೊಡೆದಾಟಕ್ಕೆ ತಿರುಗಿದೆ ಎಂದು ತಿಳಿದು ಬಂದಿದೆ.ಈಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು , ಮುಂದಿನ ತನಿಖೆ ನಡೆಯುತ್ತಿದೆ.

