ಬಂಟ್ವಾಳ  : ಉನ್ನತ  ಶಿಕ್ಷಣ ಸಂಸ್ಥೆಗಳು ಗ್ರಾಮೀಣ ಪ್ರದೇಶ ದ ಅಭಿವೃದ್ಧಿಗೆ ಶ್ರಮಿಸಬೇಕು ಆ ಮೂಲಕ ರಾಷ್ಟ್ರ ದ  ಉನ್ನತಿಯಾಗಬೇಕು  ಎಂದು ನಿಟ್ಟೆ ವಿಶ್ವ ವಿದ್ಯಾಲಯದ ಅಂಗ ಸಂಸ್ಥೆ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಯು. ಎಸ್. ಕೃಷ್ಣ ನಾಯಕ್ ಹೇಳಿದ್ದಾರೆ.

IMG-20191017-WA0042

ಅರ್ಕುಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರತ ಸರಕಾರ ದ ಬೃಹತ್ ಯೋಜನೆಗಳಲ್ಲೊಂದಾದ ಉನ್ನತ ಭಾರತ್ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.   ನಿಟ್ಟೆ ವಿಶ್ವ ವಿದ್ಯಾಲಯದ ಅಂಗ ಸಂಸ್ಥೆ ಎ. ಬಿ .ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯದ ನೇತೃತ್ವ ದಲ್ಲಿ ಸೇವಾಂಜಲಿ ಅರೋಗ್ಯ ಕೇಂದ್ರ ಫರಂಗಿಪೇಟೆ ಹಾಗೂ ಅಡ್ಯಾರ್ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಅರ್ಕುಳ ಗ್ರಾಮದ ಎಲ್ಲ ಮನೆಗಳನ್ನು  ಸಂಪರ್ಕಿಸಿ  ಮಾಹಿತಿ ಸಂಗ್ರಹಿಸಲಾಗುವುದು,ಆ ಮೂಲಕ ಉನ್ನತ ಭಾರತ್ ಅಭಿಯಾನದ ಪ್ರಯೋಜನ ಒದಗಿಸಲಾಗುವುದು ಎಂದರು.

IMG-20191017-WA0045

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ರವರು ಪ್ರಾಸ್ತಾವಿಕ ವಾಗಿ ಮಾತನಾಡಿ  ಗ್ರಾಮದ ಎಲ್ಲ ಮನೆಗಳನ್ನು ಸಂಪರ್ಕಿಸುವಲ್ಲಿ ಯಾವುದೇ ತಾರತಮ್ಯ ಮಾಡಬಾರದು, ವಿಶ್ವ  ವಿದ್ಯಾಲಯದ ವಿದ್ಯಾರ್ಥಿಗಳಿಗೆ  ಭಾಷಾ ಸಂವಹನೆ ಕೊರತೆಯಾದಾಗ ಆಶಾ ಮತ್ತು ಅಂಗವಾಡಿ ಕಾರ್ಯಕರ್ತೆಯರು , ಗ್ರಾಮ ಪಂಚಾಯತ್ ಸದಸ್ಯರು ಸಹಕರಿಸಬೇಕು ಎಂದರು.  ಈ ಸಂದರ್ಭದಲ್ಲಿ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ ಆದ್ರಿ ಡಿಕ್ರೂಜ್ , ಡಾ ರಂಜಿತ್ ಶೆಟ್ಟಿ , ಡಾ ಸಹನಾ ಮಾಬೆನ್ ಅಡ್ಯಾರ್ ಪಂಚಾಯತ್ ಅಧ್ಯಕ್ಷೆ  ಪ್ರತಿಮಾ ಮೋಹನ್ , ಉಪಾಧ್ಯಕ್ಷೆ ಆಶಾ ಪಿ ಆಚಾರ್ಯ , ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ತುಪ್ಪೆಕಲ್ಲು , ಸುಕುಮಾರ್ ಧರ್ಮಗಿರಿ , ವಿ ಅಬ್ಬಾಸ್ , ಉಬೇದುಲ್ಲಾ , ಯಾಸೀನ್  ಅಲ್ಲದೆ ಅಂಗನವಾಡಿ  , ಆಶಾ ಕಾರ್ಯಕರ್ತೆಯರು , ಸಾಮಾಜಿಕ ಕಾರ್ಯಕರ್ತರು  ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *