ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಶಿಶು ಅಭಿವೃದ್ಧಿ ಯೋಜನೆ ವಿಟ್ಲ,ಮಂಚಿ ವಲಯ, ಮಂಚಿ ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ ಮಂಚಿ ಇವÀರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನ ಮಾಸಾಚರಣೆ. ಸೆಪ್ಟಂಬರ್-2019 ಹಾಗೂ ಹೆಣ್ಣು ಮಕ್ಕಳ ಶಿಶು ಪ್ರದರ್ಶನ, ವಿಶ್ವ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಮಂಚಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾಪಂಚಾಯತ್ ಸದಸ್ಯರಾದ ಶ್ರೀ ಎಂ.ಎಸ್. ಮಹಮ್ಮದ್ ರವರು ದೀಪ ಬೆಳಗಿಸಿ ಉದ್ಘಾಟಿಸಿ, ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮ ಹಾಗೂ ನೈಸರ್ಗಿಕವಾಗಿ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿ, ತಯಾರಿಸಿದ ಪೌಷ್ಠಿಕ ಆಹಾರದ ಬಗ್ಗೆ, ಸಮುದಾಯದ ಭಾಗವಹಿಸುವಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶ್ರೀಯುತ ಅಬ್ಬಾಸ್ ಆಲಿಯವರು ಮಾತನಾಡಿ ಮಕ್ಕಳು, ಗರ್ಭಿಣಿ,ಬಾಣಂತಿ ಮಹಿಳೆಯರ ಪೋಷಣೆಗೆ ಪೌಷ್ಠಿಕ ಆಹಾರ ಬಹಳಮುಖ್ಯ ವಾದುದುದು. ಇದರಿಂದ ಆರೋಗ್ಯ ರಕ್ಷಣೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರಾದ ಡಾ//ರೋಹಿಣಿ ಇವರು ಪೌಷ್ಠಿಕಾಂಶ ಇರುವ ಆಹಾರದ ಬಗ್ಗೆ ಎದೆಹಾಲಿನ ಮಹತ್ವದ ಬಗ್ಗೆ, ಪೂರಕ ಆಹಾರದ ಬಗ್ಗೆ, ಎನ್.ಡಿ.ಡಿ. ಕಾರ್ಯಕ್ರಮದ ಬಗ್ಗೆ ಮಹಿತಿ ನೀಡಿದರು. ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರಮೀಳರವರು ಮಾತನಾಡಿ ಪ್ರಕೃತಿಯಲ್ಲಿ ದೊರೆಯುವ ಆಹಾರಗಳು ರಾಸಾಯನಿಕ ಮುಕ್ತವಾಗಿ ಇರುತ್ತವೆ. ಇದನ್ನು ಹೆಚ್ಚು ಹೆಚ್ಚು ಬಳಸುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಜಿ.ಎಂ. ಇಬ್ರಾಹಿಂ, ಪ್ರತಿಮಾಕೆ.ಎಸ್., ರೋಜಿ ಡಿಮೆಲ್ಲೋ, ಆಸ್ಯಮ್ಮ, ಭಾಗೀರಥಿ,ಮತ್ತು ಮಕ್ಕಳ ಪೋಷಕರು, ಸ್ತ್ರೀಶಕ್ತಿ ಗುಂಪಿನ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯವರು, ಆಶಾ ಕಾರ್ಯಕರ್ತೆಯವರು ಉಪಸ್ಥಿತರಿದ್ದರು. ಸುಮಾರು 60ಬಗೆಯ ವಿವಿಧ ಪೌಷ್ಠಿಕಾಂ±ಯುಕ್ತ ಆಹಾರಗಳನ್ನು ಪ್ರದರ್ಶಿಸಲಾಯಿತು ಮೇಲ್ವಿಚಾರಕಿ ಶ್ರೀಮತಿ ಗುಣವತಿ ಇವರು ಪೋಷಣಾಮಾಸಾ ಚರಣೆ ಬಗ್ಗೆ, ಹೆಣ್ಣು ಮಕ್ಕಳ ಶಿಶು ಪ್ರದರ್ಶನ ಬಗ್ಗೆ, ಪೌಷ್ಠಿಕ ಅಹಾರ ಸಪ್ತಾಹ ಬಗ್ಗೆ ಪ್ರಸ್ತಾವಿಕ ಮಾತುಗಳನ್ನಾಡಿ ಭಾಗವಹಿಸಿದ ಎಲ್ಲರನ್ನು ಸ್ವಾಗತಿಸಿದರು.. ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಾದ ಶ್ರೀಮತಿ ಮಾಯಾಕುಮಾರಿ ಇವರು ವಂದನಾರ್ಪಣೆಗೈದರು.
