ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ಇದರ ಆಶ್ರಯದಲ್ಲಿ ಎಸ್ ಪಿ ವೈ ಎಸ್ ಎಸ್ ಕರ್ನಾಟಕ ಕೇಂದ್ರ ಸಮಿತಿ ನೇತ್ರಾವತಿ ವಲಯ ಮಂಗಳೂರು. 1980 ರಿಂದ ಆರೋಗ್ಯವಂತ ಸಮಾಜಕ್ಕಾಗಿ ಉಚಿತ ಯೋಗ ಶಿಕ್ಷಣವನ್ನು ಹಮ್ಮಿಕೊಂಡು ಸಾಮಾಜಿಕ ಸಾಮರಸ್ಯ ಎಂಬ ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ನವರಾತ್ರಿ ಮಹೋತ್ಸವದಂದು ಸೆ.29ರಂದು ಭಾನುವಾರ ಬೆಳಗ್ಗೆ 5.30ರಿಂದ 7ಗಂಟೆಯವರೆಗೆ “ಸಾಮೂಹಿಕ ಯೋಗ ದುರ್ಗಾನಮಸ್ಕಾರ ಹಾಗೂ ಸಾರ್ವಜನಿಕ ಶ್ರೀ ಮಹಾಲಕ್ಷ್ಮೀ ಅಷ್ಟಕಂ ಸ್ತೋತ್ರ ಪಠಣೆ” ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಹೊರಾಂಗಣದಲ್ಲಿ ನಡೆಯಲಿದೆ ಎಂದು ಸಂಘಟನೆಯ ಪ್ರಕಟನೆ ತಿಳಿಸಿದೆ.
