ನ್ಯೂಯಾರ್ಕ್: ಅಮೇರಿಕಾ ಪ್ರವಾಸದಲ್ಲಿರುವ ನರೇಂದ್ರ ಮೋದಿಗೆ ಅಲ್ಲಿನ ಕೋರ್ಟ್ ಸಮನ್ಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಅಮೇರಿಕಾ ಅವರ ಕೈಗೆ ಸಮನ್ಸ್ ಹೇಗೆ ಒಪ್ಪಿಸಬಹುದೆಂಬುದನ್ನು ಚಿಂತಿಸುತ್ತಿದೆ. ಮೋದಿ ತನ್ನ ಸುತ್ತ ವರ್ತುಲಾಕಾರದಿಂದ ಬೇಲಿ ರಚಿಸಿರುವುದರಿಂದ ಅವರಿಗೆ ಸಮನ್ಸ್ ತಲುಪಿಸಲು ಸಾಧ್ಯವಿಲ್ಲವೆಂಬುದು ಭಾರತದ ಅಭಿಪ್ರಾಯವಾಗಿದೆ.
ಮೋದಿಯವರಿಗೆ ಸಮನ್ಸ್ ತಲುಪಿಸಲು ಪರದಾಟ ನಡೆಸುತ್ತಿರುವ ಅಮೇರಿಕಾದ ಮಾನವ ಹಕ್ಕುಗಳ ಸಂಘಟನೆ ಮೋದಿ ಅವರ ಕೈಗೆ ಸಮನ್ಸ್ ತಲುಪಿಸಲು 10 ಸಾವಿರ ಡಾಲರ್ ಬಹುಮಾನ ಘೋಷಿಸಿದೆ. ಯಾರಾದರೂ ಬಂದು ಸಮನ್ಸ್ ಒಪ್ಪಿಸಬೇಕು ಹಾಗೂ ಅದಕ್ಕೆ ಸೂಕ್ತವಾದ ವಿಡಿಯೋ ಪುರಾವೆ, ಸಾಕ್ಷ್ಯಾಧಾರ, ಭಾವಚಿತ್ರಒದಗಿಸಿ ಮೋದಿಗೆ ಕೈಗೆ ಸಮನ್ಸ್ ಒಪ್ಪಿಸಿದರೆ ಆತನಿಗೆ ಡಾಲರ್ ಕೊಡಲು ಮುಂದಾಗಿರುವ ಮಾನವ ಹಕ್ಕು ಸಂಸ್ಥೆ ಬಹುಮಾನದ ಆಸೆ ಹುಟ್ಟಿಸಿದೆ. ಇನ್ನೊಂದು ಪ್ರಕಾರ ಅಮೇರಿಕಾ ಪ್ರವಾಸದಲ್ಲಿರುವ ಮೋದಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವುದು ಅಮೇರಿಕಾದ ಕರ್ತವ್ಯವಾಗಿರುವುದರಿಂದ ಮೋದಿ ಕೈಗೆ ಅನ್ಯ ವ್ಯಕ್ತಿಗಳು ಸಮನ್ಸ್ ಒದಗಿಸುವುದು ದೂರದ ಮಾತೇ ಆಗಿದೆ.
ಅಲ್ಲದೆ ಅಮೇರಿಕಾದ ಕಾನೂನು ಪ್ರಕಾರ ಸಮನ್ಸ್ ಹೊಂದಿದ ವ್ಯಕ್ತಿಗೆ ಅದನ್ನು ತಲುಪಿಸಲು 10 ಅಡಿ ದೂರದಿಂದ ಅವನತ್ತ ಎಸೆದರೆ ಸಮನ್ಸ್ ತಲುಪಿದಂತೆಯೇ ಎಂದು ಅರ್ಥ. ಆದರೆ ಮೋದಿ ಅವರ ಭದ್ರತಾ ಅಧಿಕಾರಿಗಳು ಇದಕ್ಕೆ ಅವಕಾಶ ಮಾಡಿಕೊಡುವುದು ಅಷ್ಟು ಸುಲಭವಿಲ್ಲ.
ಅಮೆರಿಕದ ಶ್ವೇತ ಭವನವು ಈ ಒಟ್ಟು ವಿದ್ಯಮಾನಕ್ಕೆ ಅಷ್ಟೇನೂ ಮಹತ್ವ ನೀಡಿಲ್ಲ; ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೋಸ್ ಅರ್ನ್ಸ್ಟ್ ಅವರು ಪ್ರಧಾನಿ ಮೋದಿ ಅವರ ಈ ಬಹುಮುಖ್ಯ ಭೇಟಿಯ ಮೇಲೆ ಕೋರ್ಟಿನ ಸಮನ್ಸ್ನಿಂದ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

