ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಹವ್ಯಕ ಮಂಡಲ ವತಿಯಿಂದ ನಿಯೋಗವು ಗುರುವಾರ ಬಿ.ಸಿ.ರೋಡ್ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಹೊಸನಗರ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಹೂಡಿರುವ ಸುಳ್ಳು ದೂರಿನ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಬೆಳಕಿಗೆ ತರಬೇಕು ಎಂದು ಆಗ್ರಹಿಸಿದರು.

ಮುಳ್ಳುಂಜ ವೆಂಕಟೇಶ್ವರ ಭಟ್, ರಾಕೋಡಿ ಈಶ್ವರ ಭಟ್, ಸತೀಶ ಪಂಜಿಗದ್ದೆ, ಕೃಷ್ಣಮೂತರ್ಿ ಕಟ್ಟೆ, ಕುದ್ಕುಳಿ ಕೃಷ್ಣ ಭಟ್, ಕೆ.ಟಿ. ಗಣೇಶ್, ಎ. ಮೋಹನ ಅಜಕಳ, ಶ್ಯಾಮ ಸುಬ್ರಹ್ಮಣ್ಯ, ಮುರಳೀಕೃಷ್ಣ ಕುಕ್ಕಿಲ, ಕೆ. ಗೋವಿಂದ ಭಟ್, ರಾಮಕೃಷ್ಣ ಭಟ್, ಅಡ್ಕತ್ತಿಮಾರು ರಾಮಚಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು.
