ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ನಿ.) ಬಿರ್ವಸೆಂಟರ್ ಮೆಲ್ಕಾರ್ ಪಾಣೆಮಂಗಳೂರು ಇದರ 2018-19 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ :-01-09-2019 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 11 ಕ್ಕೆ ಸಂಘದ ಆವರಣದಲ್ಲಿ ಅಧ್ಯಕ್ಷರಾದ ಶ್ರೀ. ಕೆ. ಸೇಸಪ್ಪ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಹಕಾರ ಸಂಘವು ಅಭಿವೃದ್ಧಿಯಾಗಲು ಸದಸ್ಯರ ಸಹಕಾರ ಮುಖ್ಯ ಎಂದು ಹೇಳಿದರು. ಸಂಘದ ಉಪಾಧ್ಯಕ್ಷರಾದ ಶ್ರೀ. ಕೆ. ಹರಿಕೃಷ್ಣ ಬಂಟ್ವಾಳ್ ರವರು ಮಾತನಾಡುತ್ತಾ ಸಂಘವು 2018-19 ನೇ ಸಾಲಿನ ಮಾರ್ಚ್ ತಿಂಗಳ ಕೊನೆಗೆ 45 ಕೋಟಿ ರೂ. ವ್ಯವಹಾರ ನಡೆಸಿ 10 ಕೋಟಿ ರೂ. ಠೇವಣಿ ಸಂಗ್ರಹಿಸಿ 9 ಕೋಟಿÀ ಸಾಲ ನೀಡಿ 14,05,033 ನಿವ್ವಳ ಲಾಭ ಗಳಿಸಿ ಸದಸ್ಯರಿಗೆ 13% ಡಿವಿಡೆಂಟ್ ನೀಡುವುದೆಂದು ಘೋಷಿಸಿದರು .

DSC_0207ಮುಂದಿನ ವರ್ಷದಲ್ಲಿ 12 ಕೋಟಿ ಠೇವಣಿ ಸಂಗ್ರಹಣ ಗುರಿ ಹೊಂದಲಾಗಿದೆ , ಮತ್ತು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ನಿರ್ದೇಶಕರಾದ ಕೆ. ಸಂಜೀವ ಪೂಜಾರಿ ಸಂಘದ ಅಭಿವೃಧ್ಧಿಯ ಬಗ್ಗೆ ಮಾತನಾಡಿದರು . ಸಂಘದ ವರದಿ ಮತ್ತು ಲೆಕ್ಕಪತ್ರಗಳನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಸಭೆಯಲ್ಲಿ ಮಂಡಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ . ರತ್ನಾಕರ ನಾಡಾರು , ಸಂತೋಷ್ ಕುಮಾರ್ ಕೊಟ್ಟಿಂಜ, ನಾರಾಯಣ ಪೂಜಾರಿ ಬೊಳ್ಳುಕಲ್ಲು, , ಉಮೇಶ್ ಸುವರ್ಣ ತುಂಬೆ , ರತ್ನಾಕರ ಪೂಜಾರಿ ಮೆಲ್ಕಾರ್ , ಶ್ರೀಮತಿ. ಪುಷ್ಪಾವತಿ, ಶ್ರೀಮತಿ ತುಳಸಿ ಇರಾ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು ಮತ್ತು ಕಕ್ಯಪದವು ಶಾಖಾ ವ್ಯವಸ್ಥಾಪಕ ಚರಣ್ .ಕೆ. ವಂದನಾರ್ಪಣೆಗೈದರು.

By Suddi9

Leave a Reply

Your email address will not be published. Required fields are marked *