ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್(ರಿ) ಮತ್ತು ಪಂಚರತ್ನ ಸೇವಾ ಟ್ರಸ್ಟ್ ಇವರ ಜಂಟಿ ಆಯೋಜನೆಯಲ್ಲಿ, ಗಣೇಶೋತ್ಸವದ ಪ್ರಯುಕ್ತ ಮಂಡ್ಯ ಬೆಲ್ಲದಿಂದ ನಿರ್ಮಾಣವಾದ ಪರಿಸರ ಸ್ನೇಹಿ “ಬೆಲ್ಲದ ಗಣಪತಿ”ಯ ಪ್ರದರ್ಶನವನ್ನು ಚಿತ್ತರಂಜನ್ ಸರ್ಕಲ್ ಬಳಿಯ ಮಾರುಥಿ ವಿಥಿಕಾ ಇಲ್ಲಿಯ ಪ್ರದರ್ಶನ ಮಂಟಪದಲ್ಲಿ ಏರ್ಪಡಿಸಿದೆ.e95030b0-1a21-4f2c-b553-f17575c5ef7b

ಮಂಡ್ಯದಿಂದ 240 ಕೆಜಿ ತೂಕದ ಬೆಲ್ಲದ ಗಟ್ಟಿಯನ್ನು ಗಣಪತಿ ತಯಾರಿಕೆಗೆಂದು, ವಿಶೇಷವಾಗಿ ತಯಾರಿಸಿ ಕಟಪಾಡಿಯ ವಿಜೇಂದ್ರ ಭಟ್ ಅವರು ಸಂಘಟಕರಿಗೆ ಒದಗಿಸಿದ್ದಾರೆ. ಬೆಲ್ಲದ ಗಣಪತಿಯನ್ನು ಕಲಾವಿದರಾದ ಲೊಕೇಶ್ ಚಿತ್ಪಾಡಿ, ರವಿ ಹಿರೆಬೆಟ್ಟು, ವಾಸುದೇವ ಚಿತ್ಪಾಡಿ ಅವರ ತಂಡ ನಾಜೂಕು ಕಲಾತ್ಮಾಕವಾಗಿ ತಯಾರಿಸಿದೆ, ಸುಧಾಕರ ಪಾಣ ಅವರು ಗಣಪತಿ ಮಂಟಪವನ್ನು ತೆಂಗಿನ ಗರಿಗಳಿಂದ ಅಲಂಕರಿಸಿಲಿದ್ದಾರೆ.7deb2c06-c81a-44bc-9a75-7f6e0beed862

ಸೋಮವಾರ ಬೆಳಿಗ್ಗೆ 9 ಗಂಟೆಗೆ ಸರ್ವಧರ್ಮದ ಗಣ್ಯರ ಮೂಲಕ ಉಧ್ಘಾಟನೆಗೊಳ್ಳಲಿದೆ. ಆ ಬಳಿಕ ಸಾರ್ವಜನಿಕರ ವಿಕ್ಷಣೆಗೆ ಅನುವು ಮಾಡಿ ಕೊಡಲಾಗುವುದೆಂದು ಸಮಿತಿಯ ನಿತ್ಯಾನಂದ ಒಳಕಾಡು ಅವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *