ಬಂಟ್ವಾಳ:ಸಾರ್ವಜನಿಕ ಶ್ರೀಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು ಇದರ ಆಶ್ರಯದಲ್ಲಿ 16 ನೇ ವರ್ಷದ ಸಾರ್ವಜನಿಕ ಶ್ರಿಗಣೇಶೋತ್ಸವವು ಸೆ.2 ರಿಂದ 6 ರವರೆಗೆ ಜಕ್ರಿಬೆಟ್ಟುವಿನ ದಾಸ ರೈ ಮೈದಾನದಲ್ಲಿ ಧಾರ್ಮಿಕ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಲಿದೆ.ಮಾಜಿ ಸಚಿವ ಬಿ.ರಮಾನಾಥ ರೈ ಅವರ ಪರಿಕಲ್ಪನೆಯೊಂದಿಗೆ ಆರಂಭವಾದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಜಿಪಂ ಸದಸ್ಯ ಪದ್ಮಶೇಖರ ಜೈನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೊಂಡಿತು.

79

ಸೆ.2 ರಂದು ಬೆಳಿಗ್ಗೆ ಶ್ರೀ ಗಣೇಶನ ವಿಗ್ರಹ ಪ್ರತಿಷ್ಠಾಪನೆಗೊಂಡ ಬಳಿಕಸಮಿತಿಯ ಗೌರವಾಧ್ಯಕ್ಷರಾದ ರಮಾನಾಥ ರೈ ಅವರು ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಗಣೇಶೋತ್ಸವದ  ಐದು ದಿನಗಳಲ್ಲೂ ನಿರಂತರ ಅನ್ನಸಂತರ್ಪಣೆ ನಡೆಯಲಿದೆ.ಮಹಿಳೆಯರಿಂದ ವಿಶೇಷ ಕುಂಕುಮಾರ್ಚನೆ,ಪುರುಷರು,ಮಕ್ಕಳು,ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು,ಐದುದಿನವು ಸಂಜೆ ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ.ಈ ಸಂದರ್ಭದಲ್ಲಿ ಧಾರ್ಮಿಕ ನೇತಾರರು ಧಾರ್ಮಿಕ ಉಪನ್ಯಾಸ ನೀಡುವರು ಹಾಗೆಯೇ ರಾಜಕೀಯ,ಸಾಮಾಜಿಕ ನೇತಾರರು ಭಾಗವಹಿಸುವರು,

ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಸೆ.6 ರಂದು ಶ್ರೀ ಗಣೇಶನ ವೈಭವಯುತವಾದ ಶೋಭಾಯಾತ್ರೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಪದ್ಮಶೇಖರ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಬಿ.ಸಿ.ರೋಡು : ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ 40 ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಜೋಡುಮಾರ್ಗ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ವಠಾರದ ಸಭಾ ಮಂಟಪದಲ್ಲಿ ಸೆ.2 ರಿಂದ 5 ರವರೆಗೆ ನಡೆಯಲಿದೆ.ಪ್ರತಿದೊನ ಸಂಜೆ ವಿವಿಧ ಭಜನಾ ತಂಡದಿಂದ ಭಜನೆ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.ಸೆ.5 ರಂದು ಶ್ರೀ ಗಣೇಶನ ಭವ್ಯವಾದ ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *