ಕೊಲ್ಕತ್ತಾ: ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನಜರ್ಿಯನ್ನು ಮುಕ್ತಕಂಠದಿಂದ ಹೊಗಳುವ ಮೂಲಕ ಹೊಸ ರಾಜಕೀಯ ಲೆಕ್ಕಚಾರಕ್ಕೆ ನಾಂದಿ ಹಾಡಿದ್ದಾರೆ. ತನ್ನ ಆಪ್ತ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷವನ್ನು ಕಟ್ಟಿದ ಸಂದರ್ಭದಲ್ಲಿ ರಾಜಕೀಯ ಸೇರ್ಪಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅಣ್ಣಾ ಇದೀಗ ತಾವೇ ರಾಜಕೀಯ ಪಕ್ಷವನ್ನು ಬೆಂಬಲಿಸಲು ಹೊರಟಿದ್ದಾರೆ.anna
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು ಮಮತಾ ಬ್ಯಾನಜರ್ಿ ಈಗಲೂ ಸಣ್ಣ ಕೋಣೆಯಂತ ಮನೆಯಲ್ಲಿ ವಾಸವಾಗಿದ್ದಾರೆ, ಹವಾಯಿ ಚಪ್ಪಲನ್ನೇ ಧರಿಸುತ್ತಾರೆ ಮತ್ತು ಎಂದೂ ಕಾರನ್ನು ಬಳಸುವುದಿಲ್ಲ. ಅವರಲ್ಲಿ ನಾನು ಭರವಸೆಯ ಕಿರಣವನ್ನು ಕಾಣುತ್ತೇನೆ. ಮತದಾರರು ಇಂಥವರ ಪರ ನಿಂತರೆ ದೇಶದಲ್ಲಿ ಬದಲಾವಣೆ ತರುವುದು ಕಷ್ಟವೇನಲ್ಲ. ಸ್ವಾತಂತ್ರಗಳಿಸಿದ 66 ವರ್ಷಗಳ ನಂತರವೂ ಯಾರೂ ದೇಶದ ಆಥರ್ಿಕ ವ್ಯವಸ್ಥೆಯನ್ನು ಬದಲಾಯಿಸುವ ಬಗ್ಗೆ ಯೋಚಿಸಿಲ್ಲ ಆದರೆ ಮಮತಾ ಅವರು ಯೋಚಿಸಿದ್ದಾರೆ ಎಂದು ಅಣ್ಣಾ ಪ್ರತಿಪಾದಿಸಿದರು.
ಹಜಾರೆ ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಜನಪರ ಯೋಜನೆಗಳನ್ನು ಜಾರಿಗೆ ತರುವ 17 ಸಲಹೆಗಳನ್ನು ಕಳುಹಿಸಿದ್ದರು ಮತ್ತು ಅಧಿಕಾರಕ್ಕೆ ಬಂದಲ್ಲಿ ಈ ಸಲಹೆಗಳನ್ನು ಅನುಷ್ಠಾನಕ್ಕೆ ತರುವರೇ ಎಂದು ಕೇಳಿದ್ದರು. ಆದರೆ ಈ ಸಲಹೆಗಳಿಗೆ ಮಮತಾ ಬ್ಯಾನಜರ್ಿಯನ್ನು ಬಿಟ್ಟರೆ ಮತ್ಯಾರೂ ಉತ್ತರಿಸಲಿಲ್ಲ. ಚುನಾವಣಾ ಅಭಿಯಾನದ ಕುರಿತು ಚಚರ್ೆ ನಡೆಸಲು ಫೆ.18ರಂದು ಮಮತಾರನ್ನು ದೆಹಲಿಯಲ್ಲಿ ಭೇಟಿಯಾಗುವುದಾಗಿ ಅಣ್ಣಾ ತಿಳಿಸಿದ್ದಾರೆ. ಮಮತಾರನ್ನು ಬೆಂಬಲಿಸಲು ಹೊರಟಿರುವ ಅಣ್ಣಾ ನಡೆಯ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್, ಕೇಜ್ರಿವಾಲ್ ರಾಜಕೀಯ ಸೇರಿದ ನಂತರ ಅಣ್ಣಾ ಅವರಿಗೂ ಅದೇ ಆಸೆ ಹುಟ್ಟಿರಬಹುದು. ಆದರೆ ಮಮತಾ ಬ್ಯಾನಜಿ ಜೊತೆ ಯಾರೂ ಹೊಂದಿಕೊಂಡು ಹೋಗಲು ಸಾಧ್ಯವಿಲ್ಲ. ಇನ್ನು ಅಣ್ಣಾ ಆಕೆಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದೆ.

By suddi9

Leave a Reply

Your email address will not be published. Required fields are marked *