ಬಂಟ್ವಾಳ: ತುಳು ಕುರಿತು ನಮಗೆ ಕೀಳರಿಮೆ, ಹಿಂಜರಿಕೆ ಬೇಡ. ತುಳು ಭಾಷೆ ನಾಶವಾದರೆ, ನಮ್ಮ ಬದುಕೇ ನಾಶವಾದಂತೆ. ಪೋಷಕರು ಮಕ್ಕಳಿಗೆ ತುಳು ಸಂಸ್ಕಾರ ಕಲಿಸುವ ಕೆಲಸ ಮಾಡಬೇಕೆಂದು ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರು ಹೇಳಿದರು. ಬಂಟ್ವಾಳ ತಾ.ನ ದೇವಶ್ಯಪಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಆಟಿದ ದಿನದ ವಿಶೇಷ, ಮಹತ್ವದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಮಕ್ಕಳಿಗೆ ಸ್ಥಳೀಯ ಆಹಾರ ಕ್ರಮ, ಔಷಧಿ ಕ್ರಮ, ಆರೋಗ್ಯ ವಿಧಾನವನ್ನೊಳಗೊಂಡ ತುಳು ಪ್ರಾದೇಶಿಕ ಸಂಸ್ಕೃತಿಯ ಅರಿವಾಗಬೇಕು. ಗ್ರಾಮೀಣ ಬದುಕು ಉಳಿದರೆ ಮಾತ್ರ ಸರಕಾರಿ ಶಾಲೆಗಳು ಉಳಿಯುತ್ತದೆ ಎಂದವರು ತಿಳಿಸಿದರು.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನವೀನ್ ಕುಲಾಲ್ ಸಭಾಧ್ಯಕ್ಷತೆ ವಹಿಸಿದ್ದು, ಶಾಲಾಭಿವೃದ್ದಿ ಸಮಿತಿಯ ಮಾಜಿ ಅಧ್ಯಕ್ಷ ಆದಿರಾಜ ಜೈನ್, ಸ್ಥಳೀಯ ಉದ್ಯಮಿಗಳಾದ ಮನ್ಮಥ ರಾಜ್ ಜೈನ್, ದಿವಾಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಶಾಲಾ ವಿದ್ಯಾರ್ಥಿಗಳು, ಪೋಷಕರು, ಶಾಲಾ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ದರು ಹಿರಿಯ ಯಕ್ಷಗಾನ ಕಲಾವಿದ ಅಶೋಕ ಶೆಟ್ಟಿ ಸರಪಾಡಿ ಅವರು ಆಟಿ ದಿನ ವಿಶೇಷತೆಯ ಉಪನ್ಯಾಸ ನೀಡಿದರು.ಶಾಲಾ ಮುಖ್ಯ ಶಿಕ್ಷಕ ಅವಿನಾಶ್ ಅವರು ಸ್ವಾಗತಿಸಿ, ಶಿಕ್ಷಕಿ ವಂದಿಸಿದರು.ಆಟಿದ ವಿಶೇಷ ತಿಂಡಿ ತಿನಿಸುಗಳ ಪ್ರಾತ್ಯಕ್ಷಿಕೆ ನೀಡಿ, ಆಹಾರದ ವೈಜ್ಞಾನಿಕ ಗುಣಮಟ್ಟವನ್ನು ವಿದ್ಯಾರ್ಥಿಗಳು ಪರಿಚಯಿಸಿದರು.
