ಬಂಟ್ವಾಳ: ಬಿ ಸಿ ರೋಡು ಬಿ ಮೂಡ ಗ್ರಾಮದ ಪೊನ್ನೋಡಿ ಮನೆ ಎಂಬಲ್ಲಿಯ ದಿ. ಬಾಲನ್ ಹಾಗೂ ಸರೋಜಿನಿ ದಂಪತಿಗಳ ಪುತ್ರ ಲಾರಿ ಮಾಲಿಕ ಪ್ರಶಾಂತ್ (39)ಅವಿವಾಹಿತ ಜ್ವರದಿಂದ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು ಚಿಕಿತ್ಸೆ ಫಲಕಾರಿಯಾಗದೆ ಪ್ರಶಾಂತ್ ಅವರು ಇಂದು ಭಾನುವಾರ ಮೃತ ಪಟ್ಟಿರುತ್ತಾರೆ. ಮೃದು ಸ್ವಭಾವದ ಪ್ರಶಾಂತ್ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ.
