ಬಂಟ್ವಾಳ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಇದರ ದ.ಕ ಜಿಲ್ಲಾ ಕೌನ್ಸಿಲ್ ಸಭೆಯು ಜಿಲ್ಲಾಧ್ಯಕ್ಷ ಇಬ್ರಾಹಿಮ್ ಸಖಾಫಿ ಸೆರ್ಕಳ ಅವರ ಅಧ್ಯಕ್ಷತೆಯಲ್ಲಿ ಸುರಿಬೈಲಿನ ದಾರುಲ್ ಅಶ್ ಅರಿಯ್ಯ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ನಡೆಯಿತು.ಅಶ್ಅರಿಯ್ಯ ಸಂಸ್ಥೆಯ ಮುಖ್ಯಸ್ಥ ಮುಹಮ್ಮದ್ ಅಲಿ ಸಖಾಫಿ ಅವರು ಸಭೆಯನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಸುಪ್ರೀಂ ಕೌನ್ಸಿಲ್ ನಾಯಕ ಎಸ್.ಪಿ. ಹಂಝ ಸಖಾಫಿ ಬಂಟ್ವಾಳ ನೇತೃತ್ವದಲ್ಲಿ ಕೌನ್ಸಿಲ್ ನಡೆಯಿತು. ದ.ಕ. ಜಿಲ್ಲಾ ಎಸ್ಸೆಸ್ಸೆಫ್ನಲ್ಲಿ ಸುಮಾರು ಐನೂರರಷ್ಟು ಶಾಖೆಗಳಿದ್ದು, ಇದನ್ನು ಎರಡು ವಿಭಾಗಗಳಾಗಿ ವಿಭಜಸಿ “ಎಸ್ಸೆಸ್ಸೆಫ್ ದ.ಕ ಈಸ್ಟ್” ಮತ್ತು “ಎಸ್ಸೆಸ್ಸೆಫ್ ದ.ಕ ವೆಸ್ಟ್” ಎಂದು ನಾಮಕರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸೈಯದ್ ಸಿಟಿಎಂ ಉಮರ್ ಅಸ್ಸಖಾಫ್, ಸುಪ್ರೀಂ ಕೌನ್ಸಿಲ್ ಕಾರ್ಯದರ್ಶಿ ಎಂ.ಬಿ.ಎಂ. ಸಾದಿಕ್ ಮಾಸ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಡಗು, ಉಪಾಧ್ಯಕ್ಷ ಸುಫ್ಯಾನ್ ಸಖಾಫಿ ಕಾವಳಕಟ್ಟೆ, ಕಾರ್ಯದರ್ಶಿಗಳಾದ ಹಾಫಿಳ್ ಯಾಕೂಬ್ ಸಅದಿ ನಾವೂರು, ರವೂಫ್ ಖಾನ್ ಕುಂದಾಪುರ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಅಶ್ರಫ್ ರಝಾ ಅಂಜದಿ ಉಡುಪಿ, ಹಾಗೂ ದಕ ಜಿಲ್ಲಾ ನಾಯಕರು ಉಪಸ್ಥಿತರಿದ್ದರು. ಶರೀಫ್ ನಂದಾವರ ಸ್ವಾಗತಿಸಿ, ವಂದಿಸಿದರು.
ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ:
ಎಸ್ಸೆಸ್ಸೆಫ್ ದ.ಕ ವೆಸ್ಟ್ ನೂತನ ಸಮಿತಿಯ ಅಧ್ಯಕ್ಷರಾಗಿ ಇಬ್ರಾಹಿಮ್ ಸಖಾಫಿ ಸೆರ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ನಂದಾವರ, ಕೋಶಾಧಿಕಾರಿಯಾಗಿ ಖುಬೈಬ್ ತಂಙಳ್ ಉಳ್ಳಾಲ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಸ್ತಫಾ ಮಾಸ್ಟರ್ ಉಳ್ಳಾಲ, ಉಪಾಧ್ಯಕ್ಷರಾಗಿ ಮುನೀರ್ ಸಖಾಫಿ ಉಳ್ಳಾಲ, ತೌಸೀಫ್ ಸಅದಿ ಹರೇಕಳ, ಜಮಾಲುದ್ದೀನ್ ಸಖಾಫಿ ಮುದುಂಗಾರುಕಟ್ಟೆ, ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್ ವಗ್ಗ, ರಫೀಕ್ ಸುರತ್ಕಲ್, ನವಾಝ್ ಸಖಾಫಿ ಅಡ್ಯಾರ್, ಸದಸ್ಯರಾಗಿ ಆರಿಫ್ ಝುಹ್ರಿ ಮುಕ್ಕ, ಇಬ್ರಾಹಿಂ ಅಹ್ಸನಿ ಮಂಜನಾಡಿ, ಸುಹೈಲ್ ೧೦ನೇಮೈಲು, ಜಿ.ಎ. ಇಬ್ರಾಹಿಂ ಉಳ್ಳಾಲ, ಆಬಿದ್ ನಯೀಮಿ ಕಟ್ಟತ್ತಿಲ, ಜುನೈದ್ ಸಅದಿ ವಳವೂರು, ಸಿದ್ದೀಕ್ ಬಜಪೆ, ಹೈದರಲಿ ಕೃಷ್ಣಾಪುರ, ಕರೀಂ ಕದ್ಕಾರ್, ಶಾಕಿರ್, ರಿಯಾಝ್ ಸಅದಿ ಗುರುಪುರ, ಹಮೀದ್ ತಲಪಾಡಿ, ಉಬೈದ್ ಕೋಣಾಜೆ ಅವರನ್ನು ಆಯ್ಕೆ ಮಾಡಲಾಯಿತು.
ಎಸ್ಸೆಸ್ಸೆಫ್ ದ.ಕ ಈಸ್ಟ್:
ಅಧ್ಯಕ್ಷರಾಗಿ ಕೆ.ಎಂ. ಹನೀಫ್ ಝುಹ್ರಿ ಕೊಂಬಾಳಿ, ಉಪಾಧ್ಯಕ್ಷರಾಗಿ ಅಯ್ಯೂಬ್ ಮಹ್ಳರಿ ಬೆಳ್ತಂಗಡಿ, ಇಬ್ರಾಹಿಂ ಅಮ್ಜದಿ ಸುಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಹಾಜಿ ಬೈರಿಕಟ್ಟೆ, ಕೋಶಾಧಿಕಾರಿಯಾಗಿ ಅಡ್ವಕೇಟ್ ಶಾಕಿರ್ ಮಿತ್ತೂರು, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಮ್ಮದಲಿ ತುರ್ಕಳಿಕೆ, ಕಾರ್ಯದರ್ಶಿಯಾಗಿ ಇಕ್ಬಾಲ್ ಮಾಚಾರು, ಅಬ್ದುಲ್ ರಹಿಮಾನ್ ಶರಫಿ ವಿಟ್ಲ, ದಾವುದುಲ್ ಹಕೀಂ ಕಳಂಜಿಬೈಲು, ಸದಸ್ಯರಾಗಿ ಸಲೀಂ ಮುರ ಪುತ್ತೂರು, ಫೈಝಲ್ ಝುಹ್ರಿ ಸುಳ್ಯ, ಮುಹಮ್ಮದ್ ಶರೀಫ್ ಬೆರ್ಕಳ, ರಫೀಕ್ ಅಹ್ಸನಿ ಬೋವು, ಮುಸ್ತಫಾ ಉರುವಾಲುಪದವು, ಮಸೂದ್ ಸಅದಿ ಪದ್ಮುಂಜ, ಶಫೀಕ್ ಈಶ್ವರ ಮಂಗಿಲ, ಶರೀಫ್ ನಾವೂರು ಬೆಳ್ತಂಗಡಿ, ಅಬೂಬಕರ್ ಹಿಮಮಿ ವಿಟ್ಲ, ಕೆ.ಎಂ. ಅಶ್ರಫ್ ಸಖಾಫಿ ಕನ್ಯಾನ, ಹಾರಿಸ್ ಕುಕ್ಕುಡಿ ನಾಳ, ಹಸೈನಾರ್ ನೆಕ್ಕಿಲ ಸುಳ್ಯ, ಹಾರಿಸ್ ಅಡ್ಕ ಸ್ನೇಹ ಜೀವಿ ಅವರನ್ನು ಆಯ್ಕೆ ಮಾಡಲಾಯಿತು.
