ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಶ್ರೀನಿವಾಸ್ ಇವರಿಗೆ ತಮಿಳುನಾಡಿನ ತಿರುಚನಾಪಲ್ಲಿ ಭಾರತೀದಾಸನ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಮಂಡಿಸಿದ ‘ಮ್ಯಾಪಿಂಗ್ ಆಫ್ ರಿಸರ್ಚ್ ಪ್ರೊಡ್ಯೂಕ್ಟಿವಿಟಿ ಇನ್ ಗ್ರೀನ್ ಎಕನಾಮಿಕ್ಸ್ ಎಬಿಬಿಲಿಯೋಮೆಟ್ರಿಕ್ ಸ್ಟಡಿ’ ಪ್ರಬಂಧಕ್ಕೆ ಈ ಗೌರವ ಸಂದಿದೆ.

ಅಲ್ಲಿನ ಸೈಂಟ್ ಜೋಸೆಫ್ ಕಾಲೇಜಿನ ಗ್ರಂಥಪಾಲಕ ಎಂ.ದೊರೈರಾಜನ್ ಇವರಿಗೆ ಮಾರ್ಗದರ್ಶನ ನೀಡಿದ್ದರು. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ನಾಗಮಂಗಲ ನಿವಾಸಿ ಆಗಿರುವ ಶ್ರೀನಿವಾಸ್ ಕಳೆದ 9 ವರ್ಷಗಳಿಂದ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಪಾಲಕರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಸತ್ಯನಾರಾಯಣ ಭಟ್ ತಿಳಿಸಿದ್ದಾರೆ.
