ಬಂಟ್ವಾಳ:ತಾಲ್ಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕ ಎಂಬಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ನಗರ ಪೊಲೀಸರು ಭಾನುವಾರ ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.

ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಕಪ್ ವಾಹನವೊಂದರಲ್ಲಿ ಬೃಹತ್ ಗಾತ್ರದ ಮೂರು ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಹೇರಿಕೊಂಡು ಬರುತ್ತಿದ್ದ ವಾಹನವನ್ನು ನಗರ ಪೊಲೀಸರು ತಡೆದಾಗ ನಿಲ್ಲಿಸದೆ ಪರಾರಿಯಾಗಿದೆ ಎನ್ನಲಾಗಿದೆ. ಇದರಿಂದಾಗಿ ಮತ್ತಷ್ಟು ಸಂಶಯಗೊಂಡ ಪೊಲೀಸರು ಪಿಕಪ್ ವಾಹನವನ್ನು ಬೆನ್ನಟ್ಟಿ ಬಿ.ಸಿ.ರೋಡ್-ಪೊಳಲಿ ರಸ್ತೆ ನಡುವಿನ ಪಚ್ಚಿನಡ್ಕ ಎಂಬಲ್ಲಿ ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ನಾಲ್ವರು ಆರೋಪಿಗಳ ಪೈಕಿ ಮೂವರು ಪರಾರಿಯಾಗಿದ್ದು, ಮೂಜಲ್ ಎಂಬಾತನನ್ನು ಒಟ್ಟು ರೂ 3.5ಲಕ್ಷ ಮೌಲ್ಯದ ವಾಹನ ಸಹಿತ ಮೂರು ಜಾನುವಾರುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
