ಕಾಂತಾವರ : ಗೆಳೆಯರ ಬಳಗ ಕಾಂತಾವರ ಇದರ ಆಶ್ರಯದಲ್ಲಿ ಐದನೇ ವರ್ಷದ ಕಂಡ ಡೊಂಜಿ ದಿನ ಕಾರ್ಯಕ್ರಮ ಕಾಂತಾವರ ಹೈಸ್ಕೂಲ್ ಬಳಿಯ ಜಾಕಿಬೆಟ್ಟು ಬಾಕಿಮಾರು ಗದ್ದೆಯಲ್ಲಿ ಭಾನುವಾರ ನಡೆಯಿತು. ಬಾಲಕೃಷ್ಣ ಭಟ್ ಜಾಕಿಬೆಟ್ಟು ಇವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.ಪುಟಾಣಿಗಳು,ಯುವಕರು, ಯುವತಿಯರು, ಗ್ರಾಮಸ್ಥರು, ಗೆಳೆಯರ ಬಳಗ ಕಾಂತಾವರದ ಸದಸ್ಯರು, ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡರು .
ಕಾಂತಾವರ ದೇವಸ್ಥಾನದ ಧರ್ಮದರ್ಶಿ ಜೀವಂಧರ್ ಬಳ್ಳಾಲ್, ಸಾಹಿತಿ ಡಾ ನಾ.ಮೊಗಸಾಲೆ ಗ್ರಾಮ ಪಂ ಅಧ್ಯಕ್ಷ ರಾಜೇಶ್ ಕೊಟ್ಯಾನ್,ಮಾಜಿ ಅಧ್ಯಕ್ಷರು, ಪಂ ಸದಸ್ಯರು , ಹಾಗೂ ಪ್ರಮುಖ ಮುಖ್ಯ ಅತಿಥಿಗಳು ಭಾಗವಹಿಸಿದ್ದರು.
ಯುವ ಕಂಬಳ ಓಟಗಾರ ಗುರುಪ್ರಸಾದ್ ಎಸ್ ಕೋಟ್ಯಾನ್ ಮಿತ್ತಲಚ್ಚಿಲು , ಕಾಂತಾವರ ಫ್ರೌಡಶಾಲಾ ದೈಹಿಕ ಶಿಕ್ಷಕ ಪುಪ್ಷರಾಜ್ ಜೈನ್, ಕಾಂತಾವರ ಫ್ರೌಡಶಾಲಾ ಮುಖ್ಯೋಪಾಧ್ಯಾಯ ಸುಧಾಕರ ಶೆಟ್ಟಿ, ಮಾಜಿ ಪಂಚಾಯತಿ ಅಧ್ಯಕ್ಷ ಜಯ ಎಸ್ ಕೋಟ್ಯಾನ್, ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ ನವೀನ್ ದೇವಾಡಿಗ ಕಾಂತಾವರ ಇವರನ್ನು ಗೆಳೆಯರ ಬಳಗ ಕಾಂತಾವರ ಇದರ ವತಿಯಿಂದ ಸನ್ಮಾನಿಸಲಾಯಿತು.



