ಕುಪ್ಪೆಪದವು: ಮುತ್ತೂರು ಪಂಚಾಯತ್‍ನ 2019-20ನೇ ಸಾಲಿನ ಮಹತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿಯ ಪ್ರಥಮ ಹಂತದ ಸಾಮಾಜಿಕ ಪರಿಶೋಧನಾ ಸಭೆಯು ಪಂಚಾಯತ್ ಕಚೇರಿಯಲ್ಲಿ ನಡೆಯಿತು.
ನರೇಗಾ ಯೋಜನೆಯ ತಾಲೂಕು ಸಂಯೋಜಕರಾದ ಧನಲಕ್ಷ್ಮಿ ಅವರು ನರೇಗಾ ಯೋಜನೆಯಿಂದಾಗುವ ಉಪಯೋಗಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಮಾಹಿತಿ ನೀಡಿದರು. ನರೇಗಾ ಯೋಜನೆಯಿಂದ ಜನರಿಗಾಗುವ ಪ್ರಯೋಜನಗಳು, ಯೋಜನೆಯ ಅನುಷ್ಠಾನದಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿಯನ್ನು ಸಭೆಯಲ್ಲಿ ತಿಳಿಸಿದರು.

kuppepadav_narega_1
2019-20ನೇ ಸಾಲಿನಲ್ಲಿ ಮುತ್ತೂರು ಪಂಚಾಯತ್‍ನ ಕುಳವೂರು ಮತ್ತು ಮುತ್ತೂರು ಗ್ರಾಮಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ನರೇಗಾ ಯೋಜನೆಯ ವಿವರಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಪಂಚಾಯತ್ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಪ್ರಭಾವತಿ, ಪಿಡಿಓ ವಸಂತಿ ಉಪಸ್ಥಿತರಿದ್ದರು. ನೋಡಲ್ ಅಧಿಕಾರಿಯಾಗಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಣ್ಣ ಸಭೆಯನ್ನು ನಡೆಸಿಕೊಟ್ಟರು.

kuppepadav_narega_2
ಪಂಚಾಯತ್ ಸದಸ್ಯರು ಸಭೆಯ ಆರಂಭದಲ್ಲಿ ಮಾತನಾಡಿದ ಪ್ರಗತಿಪರ ಕೃಷಿಕ ದಯಾನಂದ ಶೆಟ್ಟಿ ಕುಳವೂರು ಕಿರಿದಾಗಿರುವ ಪಂಚಾಯತ್ ಕಚೇರಿಯಲ್ಲಿಯೇ ಸಭೆ ನಡೆಸುವುದನ್ನು ಆಕ್ಷೇಪಿಸಿ ಇಷ್ಟು ಚಿಕ್ಕದಾದ ಕೊಠಡಿಯಲ್ಲಿ ಸಭೆ ನಡೆಸುತ್ತೀರಿ. ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿಗಳು ಮತ್ತು ಪಂಚಾಯತ್ ಸಿಬಂದಿ ಕುಳಿತುಕೊಳ್ಳಲು ಇಕ್ಕಟ್ಟಾಗಿರುವ ಇಲ್ಲಿ ಗ್ರಾಮಸ್ಥರು ಎಲ್ಲಿ ಕುಳಿತುಕಿಳ್ಳುವುದು? ರಸ್ತೆಯಲ್ಲಿ ನಿಲ್ಲಬೇಕೇ ಎಂದು ಪ್ರಶ್ನಿಸಿದರು. ಹೆಚ್ಚು ಸ್ಥಳಾವಕಾಶ ಇರುವಲ್ಲಿ ಸಭೆ ಯಾಕೆ ನಡೆಸುವುದಿಲ್ಲ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಪಂಚಾಯತ್ ಅಧಿಕಾರಿ ಎಲ್ಲಿ ಸಭೆ ಕರೆದರೂ ಗ್ರಾಮಸ್ಥರು ಬರುವುದಿಲ್ಲ ಅದಕ್ಕೆ ಕಚೇರಿಯಲ್ಲಿ ನಡೆಸುತ್ತಿದ್ದೇವೆ ಎಂದಯ ಸಮಜಾಯಿಷಿ ನೀಡಿದರು.

 

By suddi9

Leave a Reply

Your email address will not be published. Required fields are marked *