ಮುಂಬಯಿ: ವಿಕ್ರೋಲಿ ಪೂರ್ವದ ಕನ್ನಂವರ್ ನಗರ-2 ಇಲ್ಲಿನ ಮೇಘದೂತ್ ಕೋ.ಆಪರೇಟಿವ್ ಹೌಸಿಂಗ್ ಸೊಸೈಟಿ ನಿವಾಸಿ ಆಶಾಲತಾ ವಿಜಯಕುಮಾರ್ ಶೆಟ್ಟಿ (78.) ಕಳೆದ ಶನಿವಾರ (ಜೂ.01) ಅಲ್ಪಕಾಲದ ಅನಾರೋಗ್ಯದಿಂದ ವಿಕ್ರೋಲಿ ಪೂರ್ವದ ಗೋದ್ರೇಜ್ ಆಸ್ಪತ್ರೆಯಲ್ಲಿ ನಿಧನರಾದರು.

Ashalata V.Shetty (A)

ಭಾರತೀಯ ಕಲಾ ಮಂದಿರ್ ಇದರ ಸಂಸ್ಥಾಪಕ, ಹೆಸರಾಂತ ಶಾಸ್ತ್ರೀಯ ನಾಟ್ಯಗಾರ ಕೃಷ್ಣ ಕಾಂತಪ್ಪ ಶೆಟ್ಟಿ ಇವರ ಸುಪುತ್ರಿ ಆಗಿದ್ದ ಆಶಾಲತಾ ಮೂಲತಃ ಉಡುಪಿ ಜಿಲ್ಲೆಯ ಕಾಡೆಕಾರು ಬರ್ಮಯ್ಯ ಶೆಟ್ಟಿ ಮನೆಯವರಾಗಿದ್ದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಸದಸ್ಯ, ಮಣಿಪಾಲ್ ವಿೂಡಿಯಾ ನೆಟ್‍ವರ್ಕ್ ಲಿಮಿಟೆಡ್ ಇದರ (ಉದಯವಾಣಿ ಮುಂಬಯಿ) ಉಪ ಪ್ರಬಂಧಕ ಮನೋಜ್ ವಿ ಶೆಟ್ಟಿ ಸೇರಿದಂತೆ ಮೃತರು ಮೂರು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *