ಕೈಕಂಬ : ಗುರುಪುರ ಕೈಕಂಬದ ಸೂರಲ್ಪಾಡಿಯ ಎ.ಕೆ.ಯು ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ಮಾಧ ಮಯ್ಯ(67) ನಿನ್ನೆ ಸಂಜೆ ಮಡಿಕೇರಿಗೆ ಹೋಗುವ ದಾರಿಮಧ್ಯೆ ಕಾರು ದುರ್ಘಟನೆಯಲ್ಲಿ ಮೃತಪಟ್ಟರು.
ಇವರು ಪತ್ನಿ ಒರ್ವ ಪುತ್ರ ಹಾಗೂ ಪುತ್ರಿಯನ್ನು ಹಾಗೂ ಅಪಾರ ಶಿಷ್ಯವೃಂದದವರನ್ನು ಅಗಲಿದ್ದಾರೆ.
ಇವರ ಇಬ್ಬರು ಮಕ್ಕಳಿಗೆ ಮದುವೆಯಾಗಿದ್ದು ಮಗಳು ಮೈಸೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದು ಮಗ ಜರ್ಮನ್ನಲ್ಲಿ ಎಂಜಿನೀಯರ್ ವೃತ್ತಿಯಲ್ಲಿದ್ದಾರೆ ಇವರ ಪತ್ನಿ ಕೆ.ಎಂ.ಸಿಯಲ್ಲಿ ನರ್ಸ್ ಆಗಿದ್ದಾರೆ. ತನ್ನ ಮಗಳ ಮಗುವಿನ ಹುಟ್ಟುಹಬ್ಬ ಆಚರಿಸಲು ಮಡಿಕೇರಿಯಲ್ಲಿರುವ ಪತ್ನಿ ಮನೆಗೆ ಹೋಗುತ್ತಿದ್ದಾಗ ಕುಂಬ್ರ ಎಂಬಲ್ಲಿ ನಿಂತಿದ್ದ ಲಾರಿಗೆ ಇವರ ಕಾರು ಡಿಕ್ಕಿಯಾಗಿದ್ದು, ಕಾರು ಜಖಂಗೊಂಡಿದೆ.
ಇವರು ಹಲಾವಾರು ಸಂಸ್ಥೆಗಳಲ್ಲಿ ಸಕ್ರೀಯವಾಗಿದ್ದು ಲಯನ್ಸ್ನಲ್ಲಿ ಸ್ಥಾಪಕಸದಸ್ಯರಾಗಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ.ಅಲ್ಲದೇ ಕೆಲವು ವರ್ಷದಿಂದ ಕೈಕಂಬದ ಗಣೇಶ ಕಟ್ಟೆಯ ಗಣೇಶೋತ್ಸವ ಸೇವಾ ಸಮಿತಿಯ ಕಾರ್ಯದರ್ಶಿಯಾಗಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದಾರೆ ಇವರು ಎಕೆಯು ಶಾಲೆಯಲ್ಲಿ ನಿವೃತ್ತಿಗೊಂಡ ಬಳಿಕ ಕೈಕಂಬದಲ್ಲಿರುವ ಪೊಂಪೈ ಸ್ಕ್ವೇರ್ ಕಟ್ಟಡದಲ್ಲಿರುವ ಸಭಾಂಗಣವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

