ಗುರುಪುರ : ಗುರುಪುರದ ಮಾಣಿಬೆಟ್ಟುವಿನಲ್ಲಿ ಹೊಸದಾಗಿ ನಿರ್ಮಾಣಗೊಂಡ ಶ್ರೀ ಕೋರ್ದಬ್ಬು-ತನ್ನಿಮಾನಿಗ, ರಾಹು-ಗುಳಿಗ ಹಾಗೂ ಕಂಬೆರ್ಲು ದೈವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ ಪುನರ್ ಪ್ರತಿಷ್ಠೆ ಹಾಗೂ ಕಲಶಾಭಿಷೇಕ, ರಾತ್ರಿ ದೈವಗಳ ದರ್ಶನ ಸೇವೆ ಹಾಗೂ ನೇಮೋತ್ಸವ ಜರುಗಿತು.004

001

ರಾತ್ರಿ 9 ಗಂಟೆಗೆ ಕಾರಮೊಗರುವಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ರವಿರಾಜ ಶೆಟ್ಟಿ ಅಧ್ಯಕ್ಷೆಯಲ್ಲಿ ಧಾರ್ಮಿಕ ಸಭೆ ಜರುಗಿತು. ತುಳು ವಿದ್ವಾಂಸ ಕೆ ಕೆ ಪೇಜಾವರ ಧಾರ್ಮಿಕ ಉಪನ್ಯಾಸ ನೀಡುತ್ತ, ತುಳುನಾಡು ದೈವ-ದೇವಾರಾಧನೆಯ, ನಾಗಾರಾಧನೆಯ ನೆಲೆವೀಡು. ಸಾಂಸ್ಕøತಿಕತೆ ಮತ್ತು ಧಾರ್ಮಿಕತೆ ತುಳುವರ ಉಸಿರು. ಇಲ್ಲಿ ನೆಯಾಗಿರುವ `ಕಂಬೆರ್ಲು’ ನಾರಾಯಣ ದೇವರ ಬೆವರಿಂದ ಹುಟ್ಟಿದ ಒಂದು ದೈವ(ಸತ್ಯ). ಬಬ್ಬುವಿನ ಮಿತ್ರ ದೈವ ಕಂಬೆರ್ಲು. ನೂತನ ದೈವಾಲಯವು ದೈವಾರಾಧನೆ ಸಂಪ್ರದಾಯದಂತೆ ನಿರ್ಮಾಣಗೊಂಡಿದೆ ಎಂದರು.

002

ಅಧ್ಯಕ್ಷೀಯ ಸ್ಥಾನದಿಂದ ಡಾ. ರವಿರಾಜ ಶೆಟ್ಟಿ ಮಾತನಾಡುತ್ತ, ಇದೊಂದು ವಿಶಿಷ್ಠ ಮಹಿಳೆಯುಳ್ಳ ಸಾನಿಧ್ಯ. ಈ ಸಾನಿಧೈ ತಲೆ ಎತ್ತುವಲ್ಲಿ ಎಲ್ಲ ಜನರ ಶ್ರಮವಿದೆ ಎಂದರು.

ದೈವಜ್ಞ ಮಂಗಳೂರಿನ ಶಶಿಕುಮಾರ್ ಪಂಡಿತ್ ಮಾತನಾಡುತ್ತ, ಈ ದೈವಾಲಯ ಸ್ಮøತಿಯಲ್ಲಿ ನುಡಿದಂತೆ ಕೃತಿಯಲ್ಲಿ ರೂಪುಗೊಂಡಿದೆ. ಮಗುವಿಗೆ ಜನ್ಮವಿತ್ತ ತಾಯೊಯೊಬ್ಬಳು ಆ ಮಗುವಿನ ಮೇಲೆ ತೋರುವ ಮಮತೆ ಹಾಗೂ ಅಭಿಮಾನ ಈ ಸಾನಿಧ್ಯದ ವೈಭವ ಕಂಡಾಗ ನನಗಾಗುತ್ತದೆ ಎಂದರು.

003

ಸ್ಥಳೀಯ ಕೃಷಿಕ ಜಿ ಕೆ ಕಿಟ್ಟಣ್ಣ ರೈ ಕಾರಮೊಗರುಗುತ್ತು ಪ್ರಸ್ತಾವಿಕ ಮಾತನಾಡಿದರು. ಶೆಡ್ಡೆ ಮಂಜುನಾಥ ಭಂಡಾರಿ ಸಾನಿಧ್ಯ ಬೆಳಗಲಿ ಎಂದು ಹಾರೈಸಿದರು. ದೈವಸ್ಥಾನಕ್ಕಾಗಿ ದಾನವಿತ್ತವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೆ ಮುಂಚೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ, ದೈವಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


005 ವೇದಿಕೆಯಲ್ಲಿ ವಸಂತ ಪೂಜಾರಿ ಕುದುರು, ಯಶವಂತ ವಿ ಶೆಟ್ಟಿ ಬೆಳ್ಳೂರುಗುತ್ತು, ಗಂಗಾಧರ ಸಪಲಿಗ, ಲಕ್ಷ್ಮಣ ಸಾಲ್ಯಾನ್ ಅಳಪೆ, ಗುರುಪುರ ಗ್ರಾಪಂ ಸದಸ್ಯರಾದ ರಾಜೇಶ್ ಸುವರ್ಣ, ಸೇಸಮ್ಮ ಬರ್ಕೆ, ಶಾಂತಿ ಹಾಗೂ ವಿನಯಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು, ದೀಪಕ್ ಬಂಗೇರ ಮೊದಲಾದವರಿದ್ದರು. ಪರಮಾನಂದ ಸಾಲ್ಯಾನ್ ಹಾಗೂ ವಿನೋದ್ ಬರ್ಕೆ ಕಾರ್ಯಕ್ರಮ ನಿರೂಪಿಸಿದರು. ಜಿ ಕೆ ಹರಿಪ್ರಸಾದ್ ರೈ ಕಾರಮೊಗರುಗುತ್ತು ವಂದಿಸಿದರು.

By suddi9

Leave a Reply

Your email address will not be published. Required fields are marked *