ಕೈಕಂಬ:ನೂತನವಾಗಿ ನಿರ್ಮಾಣಗೊಂಡ ದೈವಸ್ಥಾನದಲ್ಲಿ ಮೇ. 8 ಮತ್ತು 9ರಂದು ಜಿ ಟಿ ವಾಸುದೇವ ಭಟ್ ನೇತೃತ್ವದಲ್ಲಿ ವಿನಾಯಕ ಕಾರಂತ ಕಾವೂರು ಪೌರೋಹಿತ್ಯದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಜರುಗಲಿದೆ. ಮೇ 7ರಂದು ಶಿಲ್ಪಿಗಳ ಆಲಯ ಸ್ವೀಕಾರದೊಂದಿಗೆ ಧಾಮಿರ್ಕಕ ಕಾರ್ಮಿಕ ಆರಂಭವಾಗಲಿದೆ.

gur-may-7-kordabbu mancha meravanige-1

ಬಳಿಕ ಕಂಬೆರ್ಲು ಮತ್ತು ಉಳ್ಳಾಲ್ತಿ ದೈವದ ಪುನರ್ ಪ್ರತಿಷ್ಠೆ ಹಾಗೂ ಕಂಬೆರ್ಲು ದೈವದ ದರ್ಶನ ಸೇವೆ, ಬಳಿಕ ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 2ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ `ಬಬ್ಬು ಬಾರಗ’ ಯಕ್ಷಗಾನ ತಾಳಮದ್ದಳೆ ಜರುಗಲಿದೆ. ಸಂಜೆ 5ಕ್ಕೆ ಭಂಡಾರ ಏರುವಿಕೆ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, ರಾತ್ರಿ 7ರಿಂದ ರಂಗ ಸುದರ್ಶನ ಸಸಿಹಿತ್ಲು ಕಲಾವಿದರಿಂದ `ಬಾಲೆಗ್ ಒಲಿನ ಭ್ರಾಮರಿ’ ತುಳು ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.

gur-may-7-kordabbu-3

ಸಂಜೆ 8:30ಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ. ಸಂಸದ ನಳಿನ್ ಕುಮಾರ್ ಕಟೀಲ್, ಎಂಎಲ್‍ಸಿ ಐವನ್ ಡಿ’ಸೋಜ, ಡಾ. ಎಂ ಎನ್ ರಾಜೇಂದ್ರಕುಮಾರ್, ಕೆ ಕೆ ಪೇಜಾವರ(ಧಾರ್ಮಿಕ ಉಪನ್ಯಾಸ), ಶಶಿಕುಮಾರ್ ಪಂಡಿತ್, ಮಂಜುನಾಥ ಭಂಡಾರಿ, ಯತಿರಾಜ ಶೆಟ್ಟಿ, ವಸಂತ ಪೂಜಾರಿ, ಯಶವಂತ ಶೆಟ್ಟಿ ಬೆಳ್ಳೂರುಗುತ್ತು, ರಾಜೇಶ್ ಸುವರ್ಣ, ಸೇಸಮ್ಮ ಬರ್ಕೆ, ಶಾಂತಿ ಪಾಲ್ಗೊಳ್ಳುವರು. ರಾತ್ರಿ 10:30ರಿಂದ ಕೋರ್ದಬ್ಬು ಮತ್ತು ತನ್ನಿಮಾನಿಗ ದೈವಗಳ ನೇಮೋತ್ಸವ ಹಾಗೂ ಮೇ 9ರಂದು ಸಂಜೆ 6ರಿಂದ ಗುಳಿಗ ಪಂಜುರ್ಲಿ, ರಾಹುಗುಳಿಗ ದೈವಗಳ ನೇಮೋತ್ಸವ ಜರುಗಲಿದೆ.

 

By suddi9

Leave a Reply

Your email address will not be published. Required fields are marked *