ಕೈಕಂಬ:ಯುವವಾಹಿಣಿ(ರಿ)ಇದರ ಕುಪ್ಪೆಪದವು ಘಟಕದ 2019 ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಿತು.ಬಿಲ್ಲವ ಸೇವಾ ಸಮಿತಿ ಕುಪ್ಪೆಪದವು ಇದರ ಅಧ್ಯಕ್ಷರಾದ ಹಿರಣ್ಯಕ್ಷ ಕೋಟ್ಯಾನ್ ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಶುಭಹಾರೈಸಿದರು.ಸಮಾರಂಭದಲ್ಲಿ ಮಾತನಾಡಿದ ಬಿಲ್ಲವ ಮುಖಂಡ ಹಾಗೂ ದ.ಕ.ಜಿಲ್ಲಾ ಕ್ಯಾಟರಿಂಗ್ ಮಾಲಕರ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಬೋಲಾರ ಯುವವಾಹಿನಿ ತನ್ನ ಕಾರ್ಯಚಟುವಟಿಕೆಗಳ ಮೂಲಕ ಸಮರ್ಥ ನಾಯಕರನ್ನು ಸೃಷ್ಟಿಸಿ ಸಮಾಜಕ್ಕೆ ನೀಡುತ್ತಿದೆಯಲ್ಲದೆ ಸಮಾಜದ ಅಭಿವೃದ್ದೀಗಾಗಿ ಶ್ರಮಿಸುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಹಿರಿಯರನ್ನು, ಮಹಿಳೆಯರನ್ನು ಗೌರವದಿಂದ ಕಂಡು ನಾರಾಯಣ ಗುರುಗಳು ಭೋದಿಸಿದಂತೆ ನಮ್ಮೊಲಗಿನ ವೈಮನಸ್ಸನ್ನು ಮರೆತು ಒಗ್ಗಟ್ಟಾಗಿ ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿ ಕುಪ್ಪೆಪದವು ಘಟಕ ಸಮಾಜಮುಖಿ ಕೆಲಸ ಮಾಡಿತ್ತಿದ್ದು ಹೀಗೆ ಯಾಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭಹಾರೈಸಿದರು. ನಂತರ ಪದಾಧಿಕಾರಿಗಳನ್ನು ಕುಪ್ಪೆಪದವು ಘಟಕದ ಸಲಹೆಗಾರ ಪರಮೇಶ್ವರ್ ಪೂಜಾರಿ ಪರಿಚಯಿಸಿ ಸ್ವಾಗತಿಸಿದರು.ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಜಯ್ ಅಮೀನ್ ನಾಗಂದಡಿ, ಉಪಾಧ್ಯಕ್ಷ ಸತೀಶ್ ಹೊಸಮನೆ, ಕಾರ್ಯದರ್ಶಿ ಗೀತಾ ಚಂದ್ರಮಜಲು ಸೇರಿದಂತೆ ಹದಿಮೂರು ಪದಾಧಿಕಾರಿಗಳಿಗೆ ಮಂಗಳೂರು ಕೇಂದ್ರೀಯ ಸಮಿತಿಯ ಉಪಾಧ್ಯಕ್ಷರಾದ ನರೇಶ್ ಸಸಿಹಿತ್ಲು ಪ್ರತಿಜ್ಞಾವಿಧಿ ಭೋದಿಸಿದರು. ಸೇನಾಯೋಧ ಕುಪ್ಪೆಪದವು ಅಶೋಕ್ ಕುಮಾರ್ ಅಂಬೆಲೊಟ್ಟುರವರನ್ನು ಸಮಾರಂಭದಲ್ಲಿ ಸಮ್ಮಾನಿಸಲಾಯಿತು.ಈ ಬಾರಿಯ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಷ್ಕಾರ ಮತ್ತು ಅಪಘಾತದಲ್ಲಿ ಗಾಯಗೊಂಡಿರುವ ಸಂಜಯ ಅಮೀನ್‍ರವರಿಗೆ ಸಹಾಯಧನವನ್ನು ನೀಡಲಾಯ್ತು.

ಅರುಣ್‍ಕುಮಾರ್ ಅಂಬೆಲೊಟ್ಟು ಸ್ವಾಗತಿಸಿದರು.ನಿರ್ಗಮನ ಕಾರ್ಯದರ್ಶಿ ರಿತೇಶ್ ನೇಲಚ್ಚಿಲ್ ಘಟಕದ ಗತವರ್ಷದ ವರದಿಯನ್ನು ಮಂಡಿಸಿದರು. ಹಿರಿಯರಾದ ಉಮೇಶ್ ಅಮೀನ್ ನಾಗಂದಡಿ, ವಿಶ್ವನಾಥ ಕಲ್ಪನೆ, ಕೇಂದ್ರೀಯ ಸಮಿತಿ, ವಿವಿಧೆಡೆಯ ಘಟಕಗಳ ಪದಾಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದರು. ನೂತನ ಕಾರ್ಯದರ್ಶಿ ಗೀತಾ ಚಂದ್ರ ಮಜಲು ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಅಪ್ಟೆಪದವು ವಂದಿಸಿದರು.
