ಬಂಟ್ವಾಳ: ಪ್ರತಿದಿನ  ಖಾಕಿ ತೊಟ್ಟು ಕೈಯಲ್ಲಿ   ಸೀಟಿ ಊದಿ  ಟ್ರಾಫಿಕ್ ಕಿರಿಕಿರಿಯನ್ನು ಸರಿ  ಪಡಿಸುತ್ತಿರುವ ಬಂಟ್ವಾಳ  ಟ್ರಾಫಿಕ್ ಪೋಲೀಸರು ಭಾನುವಾರ ಬೆಳಿಗ್ಗೆ ಸಾಲಾಗಿ ನರಹರಿ ಪರ್ವತಕ್ಕೆ ಟ್ರಕ್ಕಿಂಗ್ ಹೊರಟಿದ್ದರು.   ಬಿಳಿ ಟೀ ಶರ್ಟ್ ಖಾಕಿ ಪ್ಯಾಂಟ್ ಸಮವಸ್ತ್ರದಲ್ಲಿ ಮೆಲ್ಕಾರ್ ಟ್ರಾಫಿಕ್ ಠಾಣೆಯಿಂದ ಹೊರಟ  ಎಲ್ಲಾ ಸಿಬ್ಬಂದಿ ಗಳು ಸಾಲಾಗಿ ಶಿಸ್ತು ಬದ್ದವಾಗಿ ನಡೆದುಕೊಂಡು ರಸ್ತೆಯಲ್ಲಿ ವಾಕಿಂಗ್ ನಲ್ಲಿ   ನೇರವಾಗಿ  ತೆರಳಿದ್ದು ನರಹರಿ ಶ್ರೀ ಸದಾಶಿವ ದೇವಸ್ಥಾನಕ್ಕೆ.
IMG-20190505-WA0044
ದಿನದ 24 ಗಂಟೆಯೂ ಕೆಲಸದ ಒತ್ತಡದ ಮಧ್ಯೆ ಆರೋಗ್ಯದ ಕಡೆಗೆ ಗಮನ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೋಲೀಸರು  ವಾರದಲ್ಲಿ ಒಂದು ದಿನವಾದರೂ ಟ್ರಕ್ಕಿಂಗ್ , ವಾಕಿಂಗ್ , ಯೋಗ , ಹೀಗೆ ವಿವಿಧ ರೀತಿಯಲ್ಲಿ ಪೋಲೀಸರನ್ನು ತೊಡಗಿಸಿಕೊಳ್ಳಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಮೀಪ್ರಸಾದ್ ಅವರು ನಿರ್ದೇಶಿಸಿದ್ದು, ಈ ವಿನೂತನ  ಯೋಜನೆಗೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಚಾಲನೆ ನೀಡಿದ್ದಾರೆ.
IMG-20190505-WA0045

ಪೋಲೀಸರ ಮನಸ್ಸಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಎಸ್ಪಿಯವರ ಸೂಚನೆಯಂತರ ಸಿಬಂದಿಗಳ  ತಂಡದೊಂದಿಗೆ ಟ್ರಕ್ಕಿಂಗ್ ಹೋಗುತ್ತಿರುವುದಾಗಿ ಬಂಟ್ವಾಳ ಟ್ರಾಫಿಕ್ ಎಸ್.ಐ. ಮಂಜುನಾಥ್ ತಿಳಿಸಿದ್ದಾರೆ. ‌

ಪ್ರತಿ ವಾರದ ಒಂದುದಿನ ಯೋಗ,ಟ್ರಕ್ಕಿಂಗ್ ನಂತಹ  ವಿಭಿನ್ನ ರೀತಿಯ ಚಟುವಟಿಕೆಯ ಮೂಲಕ ಪೋಲೀಸರ  , ಬೌದ್ಧಿಕ ಮಟ್ಟವನ್ನು  ಉತ್ತಮ ಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ನರಹರಿ ಶ್ರೀ ಸದಾಶಿವ ದೇವಸ್ಥಾನ ಕ್ಕೆ ಟ್ರಕ್ಕಿಂಗ್ ಮೂಲಕ ಸಾಗಿ ದೇವರ ದರ್ಶನ ಪಡೆದು ಎಸ್.ಪಿ.ಯವರ ಯೋಚನೆಗೆ ನಾವು ಮೂಹೂರ್ತ ಮಾಡಿದ್ದವೆ ಎಂದು ಅವರು ಹೇಳಿದರು.

 IMG-20190505-WA0039
3 Attachments

By suddi9

Leave a Reply

Your email address will not be published. Required fields are marked *