ಬಂಟ್ವಾಳ : ಚಿರತೆಯೊಂದು ಮನೆಯಂಗಳದಲ್ಲಿ  ನಾಯಿಯನ್ನು ಬೇಟೆಯಾಡಿದ ಘಟನೆ  ಮುಂಜಾನೆ ಬಂಟ್ವಾಳ ತಾ.ನ ಮಡಾವು ಎಂಬಲ್ಲಿ ನಡೆದಿದೆ . ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಮಡಾವು ನಿವಾಸಿ ಕುಸುಮಾ ಶೆಟ್ಟಿ ಅವರ ಮನೆಯ ಅಂಗಳದಿಂದ  ಮುಂಜಾನೆ ಸುಮಾರು ಮೂರು ಗಂಟೆಯ ವೇಳೆ ಗೆ ನಾಯಿಯನ್ನು ಚಿರತೆಯೊಂದು ಬೇಟೆಯಾಡಿ.   ಎತ್ತಿ ಕೊಂಡು ಹೋಗಿದೆಯೆನ್ನಲಾಗಿದೆ. ನಾಯಿ ಜೋರಾಗಿ ಬೊಗಳುವುದನ್ನು ಕೇಳಿಸಿಕೊಂಡ ಮನೆಯವರು ಎಚ್ಚರಗೊಂಡು ಹೊರಬಂದು  ನೋಡುತ್ತಿದಂತೆ  ಚಿರತೆ ನಾಯಿಯನ್ನು ಕೊಂದು ಎತ್ತಿಕೊಂಡು ಹೋಗಿದೆ ಎಂದು ತಿಳಿದುಬಂದಿದೆ . ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳತ್ತಿದ್ದು ಸ್ಥಳೀಯರು ಆತಂಕಗೊಳಗಾಗಿದ್ದಾರೆ. ಈ ಬಗ್ಗೆ  ಬಂಟ್ವಾಳ ಅರಣ್ಯ ಇಲಾಖೆ ಗೆ ಲಿಖಿತ ವಾಗಿ ದೂರು ಕೂಡಾ ನೀಡಲಾಗಿದ್ದು, ಚಿರತೆ ಹಾವಳಿಯಿಂದ ಮುಕ್ತಿಗೊಳಿಸಲು ಈ ಭಾಗದ ಜನರು ಇಲಾಖೆ ಯ ಮೊರೆ ಹೋಗಿದ್ದಾರೆ.

By suddi9

Leave a Reply

Your email address will not be published. Required fields are marked *