ಬಂಟ್ವಾಳ: ವಿದೇಶದಿಂದ ಬರುವ ಯಾರದೋ ಲಗೇಜ್ ಬ್ಯಾಗೊಂದು ಪಾರ್ಸೆಲ್ ಮೂಲಕ ಬಂಟ್ವಾಳ ಕ್ಕೆ ಬಂದ ಬಗ್ಗೆ ವರದಿಯಾಗಿದೆ. ಅಬುದಾಬಿಯಿಂದ ಇತಿಹಾದ್ ಎರ್ ಏಸ್ ಬೆಂಗಳೂರು ಏರ್ ಪೋರ್ಟ್ ನಲ್ಲಿ ಎ.17 ರಂದು ಬಂದಿದೆ. ಬೆಂಗಳೂರಿಗೆ ವಿಮಾನದಲ್ಲಿ ಬಂದ ಕುಟುಂಬವೊಂದರ ಲಗೇಜ್ ಬ್ಯಾಗ್ ಜೊತೆ ಇತರ ಹೆಚ್ಚುವರಿ ಬ್ಯಾಗ್ ವೊಂದು ಬಂದಿದ್ದು ಅದನ್ನು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ನೀಡಲಾಗಿದೆ. ಅಬುಧಾಬಿ ಯಿಂದ ಪರ್ಲಿಯಾ ಕುಟುಂಬ ವೊಂದು ಬೆಂಗಳೂರು ಬಂದು ಅಬಳಿಕ ಇವರ ಲಗೇಜ್ ಗಳನ್ನು ಪಾರ್ಸೆಲ್ ಮೂಲಕ ಮನೆಗೆ ತಲುಪಿಸಲು ಹಣ ನೀಡಿದ್ದರು.ಆದರೆ ಮನೆಗೆ ಪಾರ್ಸೆಲ್ ಮೂಲಕ ಬಂದ ಇವರ ಪಾರ್ಸೆಲ್ ಜೊತೆ ಇನ್ನು ಒಂದು ಹೆಚ್ಚು ವರಿ ಬ್ಯಾಗ್ ಬಂದಿದೆ.

