ಬಂಟ್ವಾಳ: ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯ ಮಂಗಳೂರು, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆ 317ಡಿಯ 2019-20ನೇ ಸಾಲಿಗೆ ದ್ವಿತೀಯ ಉಪ ಗವರ್ನರ್ ಆಗಿ ವಸಂತ ಕುಮಾರ್ ಶೆಟ್ಟಿಯವರು ಚುನಾಯಿತರಾಗಿದ್ದಾರೆ.

ಕಳೆದ 46 ವರ್ಷಗಳಿಂದ ಬಂಟ್ವಾಳದಲ್ಲಿ ಹತ್ತು ಹಲವಾರು ಜನೋಪಯೋಗಿ ಹಾಗೂ ನಿರಂತರವಾದ ಸೇವಾ ಕಾರ್ಯಗಳನ್ನು ಮಾಡುತ್ತಿರುವ ಬಂಟ್ವಾಳ ಲಯನ್ಸ್ ಕ್ಲಬ್ ಗೆ ಇದೇ ಮೊದಲ ಬಾರಿಗೆ ಈ ಉಪ ಗವರ್ನರ್ ಹುದ್ದೆ ದೊರೆತಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಲಯನ್ಸ್ ಜಿಲ್ಲಾ ಸಮ್ಮೇಳನದಲ್ಲಿ ನಡೆದ ಚುನಾವಣೆಯಲ್ಲಿ ವಸಂತ ಕುಮಾರ್ ಶೆಟ್ಟಿ ಯವರಿಗೆ ಈ ಹುದ್ದೆ ಒಲಿದಿದೆ. ಲಯನ್ಸ್ ಜಿಲ್ಲೆಯನ್ನು 2021-22ನೇ ಸಾಲಿನಲ್ಲಿ ವಸಂತ ಕುಮಾರ್ ಶೆಟ್ಟಿಯವರು ಲಯನ್ಸ್ ಜಿಲ್ಲಾ ಗವರ್ನರ್ ಆಗಿ ಮುನ್ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Attachments area
