ಹಾಲಿಡೆಯಲ್ಲಿ ಆಕ್ಷಯ್ ಕುಮಾರ್ ಬ್ಯುಸಿ
ಸುದ್ದಿ9ಮುಂಬೈ: ಬಾಲಿವುಡ್ನ ಆ್ಯಕ್ಷನ್ ಹೀರೊ ಅಕ್ಷಯ್ ಕುಮಾರ್ ಮತ್ತೆ ಆ್ಯಕ್ಷನ್ ಸಿನಿಮಾಗಳತ್ತ ಮುಖ ಮಾಡಿದ್ದಾನೆ. ಈತನ ‘ಕಿಲಾಡಿ786’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಯಾವುದೇ ಸದ್ದು ಮಾಡಲಿಲ್ಲ. ಮತ್ತೊಂದೆಡೆ ‘ಬಾಸ್’ ಕೂಡಾ ಅಷ್ಟೊಂದು ಉತ್ತಮ ಪ್ರದರ್ಶನ ಕಾಣಲಿಲ್ಲ. ಆದರೂ ಎದೆಗುಂದದ ಅಕ್ಷಯ್ ತನ್ನ ಮುಂದಿನ ಚಿತ್ರ ‘ಹಾಲಿಡೆ’ಯಲ್ಲಿ ಮತ್ತೊಮ್ಮೆ ಹೊಡೆದಾಡಲು ತಯಾರಿ ನಡೆಸಿದ್ದಾನೆ.
ತಮಿಳಿನ ಸೂಪರ್ ಹಿಟ್ ಚಿತ್ರ ‘ತುಪಾಕಿ’ಯ ಹಿಂದಿ ಅವತರಣಿಕೆಯಾಗಿರುವ ಹಾಲಿಡೆ ಅಕ್ಷಯ್ ಪಾಲಿಗೆ ಬಹು ನಿರೀಕ್ಷೆಯ ಚಿತ್ರವಾಗಿದೆ. ವಿಜಯ್ ಅಭಿನಯದ ತುಪಾಕಿ ಗಲ್ಲಾ ಪೆಟ್ಟಿಗೆಯಲ್ಲಿ ಹಣ ಕೊಳ್ಳೆ ಹೊಡೆದಿತ್ತು. ಇದೇ ಮ್ಯಾಜಿಕನ್ನು ಹಿಂದಿಯಲ್ಲೂ ಮಾಡಲು ಮುಂದಾಗಿರುವ ನಿದರ್ೇಶಕ ಎ.ಆರ್. ಮುರುಗದಾಸ್ ನಟಿ ಸೋನಾಕ್ಷಿ ಸಿನ್ಹಾಳನ್ನು ಅಕ್ಷಯ್ಗೆ ಜೋಡಿಯಾಗಿಸಿದ್ದಾರೆ. ಈ ಜೋಡಿಯ ‘ರೌಡಿ ರಾಥೋಡ್’ ಚಿತ್ರ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿತ್ತು. ಹಾಲಿಡೆಯಲ್ಲಿ ಗೋವಿಂದನಿಗೂ ಕೂಡಾ ಒಂದು ಪಾತ್ರವಿದೆಯಂತೆ. ಅಕ್ಷಯ್ ಈ ಚಿತ್ರದಲ್ಲಿ ಒಬ್ಬ ಸೈನಿಕನಾಗಿ ಕಾಣಿಸಿಕೊಳ್ಳಲಿದ್ದಾನೆ.

