ಬಂಟ್ವಾಳ :  ಕೊಯಿಲ ಮತ್ತು ಪಂಜಿಕಲ್ಲು ಗ್ರಾಮಗಳ ಗಡಿ ಭಾಗದಲ್ಲಿರುವ ಕಾರಣಿಕ ಪ್ರಸಿದ್ಧ ಬಬ್ಬರಬೈಲು ದೈವಸ್ಥಾನದಲ್ಲಿ   ಎ.6ರಂದು ರಾತ್ರಿ ಬಬ್ಬರ್ಯ ದೈವ ಮತ್ತು ಪಂಜುರ್ಲಿ ದೈವದ ವಾರ್ಷಿಕ ನೇಮೋತ್ಸವ ಹಾಗೂ ಎ. 7ರಂದು ರಾತ್ರಿ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ. ಸುಮಾರು 500 ವರ್ಷಗಳ ಹಿಂದೆ ಕರಾವಳಿ ಭಾಗದ ಮೊಗವೀರ ಸಮುದಾಯ ಆರಾಧಿಸುತ್ತಿದ್ದ ಬಬ್ಬರ್ಯ ದೈವವನ್ನು ಜೈನ ಮನೆತನದವರು ಇಲ್ಲಿಯೂ ಆರಾಧಿಸುತ್ತಿದ್ದರು. ಇದರಿಂದಾಗಿ ಕಳೆದ ಐದು ವರ್ಷಗಳ ಹಿಂದೆ ಸ್ಥಳೀಯ ಭಕ್ತರು ಒಟ್ಟು ಸೇರಿ ಶ್ರಮದಾನ ಮೂಲಕ ಪಾಳುಬಿದ್ದ ದೈವಸ್ಥಾನ ಪುನರ್ ನಿರ್ಮಿಸುವ ವೇಳೆ ಹಳೆ ಮುಗುಳಿ ಸಹಿತ ದೈವವು ಬಳಸುತ್ತಿದ್ದ ವಿವಿಧ ಆಯುಧ ಮತ್ತಿತರ ಪರಿಕರ ಪತ್ತೆಯಾಗಿತ್ತು.

4btl-Koragajja

 

ಇಲ್ಲಿನ ಬಬರ್ಯ ದೈವವು ನೇಮೋತ್ಸವ ಸಂದರ್ಭದಲ್ಲಿ ‘ಗಂಗಾ ಭೇಟಿ’ಗೆ ತೆರಳಲು ಅನುಕೂಲವಾಗುವಂತೆ ಪಾಳು ಬಿದ್ದ ಕೆರೆಯನ್ನು ಕೂಡಾ ದುರಸ್ತಿಗೊಳಿಸಲಾಗಿದೆ. ಕಳೆದ ಐದು ವರ್ಷಗಳಿಂದ ನಿರಂತರವಾಗಿ ಬಬ್ಬರ್ಯ ಮತ್ತು ಪಂಜುರ್ಲಿ ದೈವಕ್ಕೆ ವಾರ್ಷಿಕ ನೇಮೋತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತಿದೆ. ಇಲ್ಲಿನ ಬಬ್ಬರಬೈಲು ಕೆರೆ ಬಳಿ ಈಚೆಗಷ್ಟೇ ನೂತನವಾಗಿ ನಿರ್ಮಾಣಗೊಂಡ ಕೊರಗಜ್ಜ ಗುಡಿಯಲ್ಲಿ ಉಡುಪಿ ಸತ್ಯನಾರಾಯಣ ಭಟ್ ಅವರು ಕೊರಗಜ್ಜ ಪ್ರತಿಷ್ಠೆ ನೆರವೇರಿಸಿದ್ದು, ಪ್ರಸಕ್ತ ವರ್ಷದಿಂದ ಇಲ್ಲಿಯೂ ವಾರ್ಷಿಕ ನೇಮೋತ್ಸವ ನಡೆಯಲಿದೆ ಎಂದು ಸಮಿತಿ ಸಂಚಾಲಕ ವಸಂತ ಕುಮಾರ್ ಅಣ್ಣಳಿಕೆ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *