ಎಂಟರ ಪೋರನಿಗೆ ಅಮೆರಿಕಾದ ಮಾಧ್ಯಮದ ಮುಂದೆ ಕುಣಿಯುವ ಭಾಗ್ಯ
ಸುದ್ದಿ9ಮುಂಬೈ: ಆತನ ವಯಸ್ಸು ಬರೀ ಎಂಟು ವರ್ಷ. ಆದರೆ ಡಾನ್ಸ್ ಮಾಡಲು ನಿಂತರೆ ದೊಡ್ಡದೊಡ್ಡ ಡಾನ್ಸರ್ಗಳನ್ನೇ ದಂಗುಬಡಿಸುತ್ತಾನೆ. ಹೆಸರು ಅಕ್ಷತ್ ಸಿಂಗ್.
ಕಲಸರ್್ ಚಾನಲ್ನಲ್ಲಿ ಪ್ರಸಾರವಾಗುವ ‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ ಕಾರ್ಯಕ್ರಮದಲ್ಲಿ ತನ್ನ ದಬಾಂಗ್ ನೃತ್ಯ ಪ್ರದಶರ್ಿಸಿ ವೀಕ್ಷಕರು ಹಾಗೂ ತೀಪರ್ುಗಾರರು ಬೆಕ್ಕಸ ಬೆರಗಾಗುವಂತೆ ಮಾಡಿದ ಅಕ್ಷತ್ನನ್ನು ಅಮೆರಿಕಾದಲ್ಲಿ ಮನೆಮಾತಾಗಿರುವ ಟಿವಿ ಶೋ ನಿರೂಪಕಿ ಎಲ್ಲೆನ್ ಡಿಜನರಸ್ ತನ್ನ ಜನಪ್ರಿಯ ಟಿವಿ ಕಾರ್ಯಕ್ರಮ ಎಲ್ಲೆನ್ ಡಿಜನರಸ್ ಶೋನಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದಾಳೆ. ಅಕ್ಷತ್ಗೆ ಎಲ್ಲೆನ್ ಯಾರೆಂಬುದೇ ಗೊತ್ತಿಲ್ಲ. ಆದರೆ ಡಾನ್ಸ್ ವಿಷಯ ಬಂದರೆ ಯಾವ ದೇಶ, ಯಾವ ವೇದಿಕೆಯಾದರೂ ಸರಿ ಸದಾ ಸಿದ್ಧ ಎಂದು ಆತ್ಮವಿಶ್ವಸದಿಂದಲೇ ಆತ ನುಡಿಯುತ್ತಾನೆ. ಎಲ್ಲೆನ್, ಅಕ್ಷತ್ಗೆ ಒದಗಿಸುತ್ತಿರುವ ವೇದಿಕೆ ಆತನ ಭವಿಷ್ಯವನ್ನು ಉಜ್ವಲಗೊಳಿಸುವುದರಲ್ಲಿ ಅನುಮಾನವಿಲ್ಲ. ಅಂದಹಾಗೆ ಅಕ್ಷತ್ಗೆ ಸಲ್ಮಾನ್ ಖಾನ್ ಡಾನ್ಸ್ ಎಂದರೆ ತುಂಬಾ ಇಷ್ಟವಂತೆ.

333-

By suddi9

Leave a Reply

Your email address will not be published. Required fields are marked *