ಕಲ್ಲಡ್ಕ: ಶ್ರೀ ರಾಮ ಶಿಶುಮಂದಿರ ಕಲ್ಲಡ್ಕದಲ್ಲಿ ಮಾತೆಯರ ಪಾದಪೂಜೆ ಮತ್ತು ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಹುಟ್ಟಿದ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ನಡೆಯಿತು.ಮಕ್ಕಳಿಗೆ ತಾಯಂದಿರ ಕೇವಲ ಪಾದಗಳು ಮಾತ್ರಕಾಣುವರೀತಿಯಲ್ಲಿ ಪರದೆಯನ್ನುಕಟ್ಟಲಾಗಿತ್ತು.ಪುಟಾಣಿಗಳು ತಮ್ಮತಮ್ಮಅಮ್ಮನ ಪಾದವನ್ನೇನೋಡಿ ಗುರುತಿಸಿ ಅದರ ಪಕ್ಕದಲ್ಲಿ ಕುಳಿತು ಕೊಳ್ಳುತ್ತಿದ್ದರು.ನಂತರ ಪರದೆಯನ್ನು ಬಿಚ್ಚಲಾಗಿತ್ತು.ಎಲ್ಲಾ ಪುಟಾಣಿಗಳು ಅವರಅಮ್ಮನ ಪಾದಗಳಿಗೆ ನೀರು ಹಾಕಿ ಅರಶಿನ ಕುಂಕುಮ ಹಚ್ಚಿ ಪುಷ್ಪವನ್ನು ಅರ್ಪಿಸಿ ಪಾದಪೂಜೆ ಮಾಡಿದರು.ಎಲ್ಲಾ ಪುಟಾಣಿಗಳು ಅವರವರಅಮ್ಮನ ಪಾದವನ್ನು ಸರಿಯಾಗಿ ಗುರುತಿಸಿದ್ದು ವಿಶೇಷವಾಗಿದೆ.ತುಂಬಾ ಸಂತೋಷದಿಂದ ಮಾತೆಯರು ಹಾಗೂ ಪುಟಾಣಿಗಳು ಈ ಪಾದಪೂಜೆಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನಂತರ ಹುಟ್ಟುಹಬ್ಬಆಚರಿಸುವ ಮಕ್ಕಳಿಗೆಆರತಿಎತ್ತಿ,ತಿಲಕಇಟ್ಟು, ಅಕ್ಷತೆ ಹಾಕಿ, ಸಿಹಿಯನ್ನು ನೀಡಿ ಮಾತೆಯರು ಶುಭ ಹಾರೈಸಿ 52 ಮಕ್ಕಳ ಹುಟ್ಟುಹಬ್ಬವನ್ನುಆಚರಿಸಲಾಯಿತು.ಕಾರ್ಯಕ್ರಮಕ್ಕೆ ಅತಿಥಿಗಳಾಗಿ ವಸಂತ ಮಾಧವ ಶ್ರೀಮಾನ್, ನಾಗೇಶ್‍ಕಲ್ಲಡ್ಕಹಾಗೂ ಡಾ||ಕಮಲಾ ಭಟ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ 141 ಮಾತೆಯರು ಭಾಗವಹಿಸಿದರು.ಕಾರ್ಯಕ್ರಮವನ್ನು ವಿದ್ಯಾ ಸ್ವಾಗತಿಸಿ, ರೋಹಿಣಿಅಶೋಕ್ ವಂದಿಸಿ, ಶ್ರೀಮತಿ ಪರಿಮಳ ನಿರೂಪಿಸಿದರು.

