ಪೊಳಲಿ: ಪೊಳಲಿ ಶ್ರೀ ಬ್ರಹ್ಮಕಲಶಾಭಿಷೇಕ ದಿನವಾದ ಇಂದು ಮಧ್ಯಾಹ್ನ 12ರ ಸುಮಾರಿಗೆ ಅನ್ನಪೂರ್ಣೇಶ್ವರಿ ಪಾಕಶಾಲೆಯಲ್ಲಿ ಪಲ್ಲಪೂಜೆಯನ್ನು ಅರ್ಚಕವೃಂದದವರು ನೆರವೇರಿಸಿದರು. ಇದಾದ ಬಳಿಕ ಆಗಮಿಸಿದ ಭಕ್ತರಿಗೆ ಮಹಾ ಅನ್ನಸಂತರ್ಪಣೆ ಆರಂಭಗೊಂಡಿತು. ತಂತ್ರಿವರೇಣ್ಯರು, ಮೊಕ್ತೇಸರರ ವೃಂದದವರು, ಆಡಳಿತ ಮಂಡಳಿಯವರು ಮುಂತಾದವರು ಇದ್ದರು.



